ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ಆಯ್ಕೆಯಾದ ಹನುಮಂತು: ಜೈಲು ಸೇರಿದ ಗ್ರೇ ಏರಿಯಾ ಕಿಂಗ್ ಮಂಜು
ಬೆಂಗಳೂರು: ಒಂದಲ್ಲಾ ಒಂದು ಕಾರಣಕ್ಕೆ ಭಾರೀ ಸದ್ದು ಮಾಡುತ್ತಿರುವ ಬಿಗ್‌ಬಾಸ್ ಸೀಸನ್ 11 ಇದೀಗ ಮುಕ್ತಾಯದ ಹಂತ ತಲುಪುತ್ತಿದೆ. ಈ ವಾರ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿದ್ದು. ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಇದ್ದ ನಾಲ್ವರ ಪೈಕಿ ಹನುಮಂತು ಅವರು ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ಫಿನಾಲೆ ಹತ್ತಿರವಾಗುತ್ತಿದ್ದಂತೆ ಕಂಟೆಸ್ಟಂಟ್‌ಗಳಲ್ಲಿ ಭಯ ಶುರುವಾಗಿದ್ದು, ಟಿಕೆಟು ಫಿನಾಲೆಗಾಗಿ ಶುಕ್ರವಾರ ನಡೆದ ರೋಚಕ ಟಾಸ್ಕ್‌ನಲ್ಲಿ ಆಡಲು ರಜತ್, ತ್ರಿವಿಕ್ರಮ್, ಹನುಮಂತ ಹಾಗೂ ಭವ್ಯ ಅವರು ಆಯ್ಕೆಯಾಗಿದ್ದರು. ಈ ನಾಲ್ವರ ಪೈಕಿ ಹನುಮಂತು ಅವರು ಟಾಸ್ಕ್ ಗೆದ್ದು ಟಿಕೆಟು ಫಿನಾಲೆಗೆ ಆಯ್ಕೆ ಆಗಿದ್ದು, ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ್ ಬಿಗ್ ಬಾಸ್ ಮನೆಗೆ ಆಗಮಿಸಿ ಹನುಮಂತು ಅವರಿಗೆ ಫಿನಾಲೆ ಟಿಕೆಟ್ ನೀಡಿದ್ದಾರೆ.
ಕೇವಲ 2 ನಿಮಿಷ 27 ಸೆಕೆಂಡ್ ನಲ್ಲಿ ಟಾಸ್ಕ್ ಮುಗಿಸಿ ಫಿನಾಲೆಗೆ ಟಿಕೆಟ್ ಪಡೆದುಕೊಂಡ ಹನುಮಂತು ಅವರಿಗೆ ಶುಭಕೋರಿದ ನಟ ಶರಣ್ ಹಾಗೂ ಅಧಿತಿ ಪ್ರಭುದೇವ್ ಎಲ್ಲಾ ಸ್ಪರ್ಧಿಗಳಿಗೂ ಆಲ್ ದಿ ಬೆಸ್ಟ್ ಹೇಳಿದರು. ಟಾಸ್ಕ್ ಫಿನಾಲೆ ಟಿಕೆಟ್ ಪಡೆದುಕೊಂಡಿರು ವ ಹನುಮಂತು ಬಿಗ್ ಬಾಸ್ ಮನೆಯ ಕೊನೆಯ ವಾರದ ಕ್ಯಾಪ್ಟನ್ ಕೂಡ ಆಗಿದ್ದಾರೆ.
ಇನ್ನು, ಕೇವಲ 2ಸೆಕೆಂಡ್ ಅಂತರದಲ್ಲಿ ತ್ರಿವಿಕ್ರಮ್ ಫಿನಾಲೆ ಟಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡರೆ, ಕೊನೆಯ ಹಂತದವರೆಗೆ ಬಂದರೂ ಫಿನಾಲೆ ಟಿಕೆಟ್ ಪಡೆಯುವಲ್ಲಿ ಸೋಲು ಅನುಭವಿಸಿದ ಭವ್ಯ ಬಹಳ ಬೇಸರದಲ್ಲಿದ್ದಾರೆ. ಈ ವಾರ ದುರ್ಬಲ ನಿರ್ಧಾರವನ್ನು ತೆಗೆದುಕೊಂಡು ಅರ್ಹತೆ ಇದ್ದರೂ ಕೂಡ ಟಾಸ್ಕ್ ಸೋತು ಟಿಕೆಟ್ ಟು ಫಿನಾಲೆ ಆಟದಿಂದ ಹೊರಗುಳಿದ ಮಂಜುಗೆ ಮನೆಯ ಎಲ್ಲಾ ಸದಸ್ಯರು ಕಳಪೆ ನೀಡಿ ಜೈಲಿಗೆ ಕಳುಹಿಸಿದ್ದಾರೆ.