ಉಡುಪಿ: ವಿದ್ಯುತ್ ಶುಲ್ಕ ಪಾವತಿಸುವ ಎಟಿಎಂ ಸ್ಥಗಿತ ಸಾರ್ವಜನಿಕರ ಪರದಾಟ

ಉಡುಪಿ ಮೆಸ್ಕಾಂ ಕಛೇರಿಯಲ್ಲಿ ವಿದ್ಯುತ್ ಶುಲ್ಕ ಪಾವತಿಸಲು, ಎ.ಟಿ.ಎಂ ನಿರ್ವಹಣೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಪರದಾಡ ಬೇಕಾದ ಪರಿಸ್ಥಿತಿ ಎದುರಾಗಿದ್ದು, ಸಾರ್ವಜನಿಕರು ಅವ್ಯವಸ್ಥೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಶುಲ್ಕ ಪಾವತಿಸಲು,ಮಣಿಪಾಲ, ಕುಂಜಿಬೆಟ್ಟು,ಪರ್ಕಳ,ಹಿರಿಯಡ್ಕ,ಮೂಡುಬೆಳ್ಳೆ, ಉದ್ಯಾವರ,ಪುತ್ತೂರು ಹಾಗೂ ಉಡುಪಿ ನಗರ ಪರಿಸರದ ಸಾರ್ವಜನಿಕರು,ಮೆಸ್ಕಾಂ ಎ.ಟಿ.ಎಂ ಸ್ಥಗಿತದಿಂದಾಗಿ ಬಹಳ‌ ತೊಂದರೆ ಅನುಭವಿಸ ಬೇಕಾಗಿದೆ.‌ಮೆಸ್ಕಾಂ ಸಿಬ್ಬಂದಿಗಳಲ್ಲಿ ಶುಲ್ಕ ಪಾವತಿಸುವ ಸಾರ್ವಜನಿಕರ ಸರತಿ ಸಾಲು ಬಹಳ ದೂರದವರೆಗೂ ಇರುತ್ತದೆ.‌ಗಂಟೆಗಟ್ಟಲೇ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಶುಲ್ಕ ಪಾವತಿಸಲು ಕೆಲಸ ಕಾರ್ಯಗಳಿಗೆ ರಜೆ ಹಾಕಬೇಕಾದ ಪರಿಸ್ಥಿತಿ ಇದೆ.ಹಿರಿಯ ನಾಗರಿಕರು ಸರತಿಸಾಲಲ್ಲಿ ನಿಂತು ಸುಸ್ತಾಗಿ ಅಸ್ವಸ್ಥರಾದ ಘಟನೆಗಳು ನಡೆದಿವೆ.‌ಆದಷ್ಟು ಬೇಗನೆ ಮೆಸ್ಕಾಂ ಅಧಿಕಾರಿಗಳು ಸ್ಥಗಿತವಾಗಿರುವ ಎ.ಟಿ.ಎಂ ಕಾರ್ಯನಿರ್ವಹಣೆಯನ್ನು ಮರುಪ್ರಾರಂಭಿಸ ಬೇಕೆಂದು ಉಡುಪಿ ಜಿಲ್ಲಾ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!