ಬ್ಲೂ ಬಾಯ್ಸ್ ಫ್ರೆಂಡ್ಸ್ ತೋನ್ಸೆ ದಶಮಾನೋತ್ಸವ: ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಣೆ

ಉಡುಪಿ: ಬ್ಲೂ ಬಾಯ್ಸ್ ಫ್ರೆಂಡ್ಸ್ ತೋನ್ಸೆ ದಶಮಾನೋತ್ಸವ ಸಮಾರಂಭವನ್ನು ನೇಜಾರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಕಂಠ ಅವರು ವಹಿಸಿದ್ದರು. ಸಮಾರಂಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಪಿಸಿ ಕಾಲೇಜಿನ ಉಪನ್ಯಾಸಕರಾದ ಮುರುಳಿ ಆಚಾರ್ಯ ಪಣಿಯೂರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರ ಮಹಿಳಾ ಮೋರ್ಚಾದ ನಿಕಟಪೂರ್ವ ಅಧ್ಯಕ್ಷರಾದ ವೀಣಾ ಶೆಟ್ಟಿ ಮಾತನಾಡಿ, ಹೊಸ ವರ್ಷ ಎಂದು ಮೋಜು- ಮಸ್ತಿ ಮಾಡುವ ಯುವಕರ ನಡುವೆ ತಮ್ಮ ಸಂಸ್ಥೆಯ ಕಾರ್ಯಕ್ರಮವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವಿಕಲಚೇತನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮುಖ್ಯಸ್ಥರಾದ ಉಮೇಶ್, ಸಾಮಾಜಿಕ ಕಾರ್ಯಕರ್ತರಾದ ರಮೇಶ್ ತಿಂಗಳಯಾ, ವತ್ಸಲಾ ಕೋಟಿಯನ್, ಹರೀಶ್ಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ ಆಚಾರ್ಯ, ನಿಯೋಜಿತ ಅಧ್ಯಕ್ಷರಾದ ವಿನೀತ್, ಸ್ಥಾಪಕ ಅಧ್ಯಕ್ಷರು ಜೆಸಿಐ ಕಲ್ಯಾಣಪುರದ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಗಾಣಿಗ ಹಾಗೂ ಕಾರ್ಯಕ್ರಮ ಸಂಚಾಲಕರಾದ ಸಹನ್ ಶೆಟ್ಟಿ, ಸ್ರಜಾನ್ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ನಿರೂಪಿಸಿದರು, ವರುಣ್ ನಾಯಕಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!