ಉಡುಪಿ: ಮರಾಟಿ ಆರೋಗ್ಯ ಸುರಕ್ಷಾ ಕಾರ್ಡ್ ನೊಂದಾವಣಿಗೆ ಅವಕಾಶ
ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮರಾಟಿ ಆರೋಗ್ಯ ಸುರಕ್ಷಾ ಕಾರ್ಡ್ ಹೊಸ ನೊಂದಾವಣೆ ಹಾಗೂ ಮರು ನೊಂದಾವಣೆ ಮಾಡಲಾಗುವುದು. ಹೊಸತಾಗಿ ಕಾರ್ಡ್ ಮಾಡಲಿಚ್ಚಿಸುವವರು ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ (ಒಂದು ಕಾರ್ಡಿನಲ್ಲಿ ಗರಿಷ್ಠ 5 ಸದಸ್ಯರು ಮಾತ್ರ) ಪ್ರತಿಯೊಂದಿಗೆ ನಮ್ಮ ಸಂಘಕ್ಕೆ ಬಂದು ನೊಂದಾವಣೆ ಮಾಡಬಹುದಾಗಿದೆ.
ಉಡುಪಿ ಜಿಲ್ಲಾ ಮಾರಾಟಿ ಸಂಘ ಕುಂಜಿಬೆಟ್ಟಿನಲ್ಲಿ ಜ.12 ಹಾಗೂ ಜ.26 ರಂದು ಬೆಳಿಗ್ಗೆ 10 ಗಂಟೆಯಿಂದ ನೀಡಬಹುದು. ಮರಾಟಿ ಆರೋಗ್ಯ ಸುರಕ್ಷಾ ಕಾರ್ಡ್ (2024) ಹೊಂದಿದ್ದವರು ಹಳೆ ಆರೋಗ್ಯ ಸುರಕ್ಷಾ ಕಾರ್ಡಿನ (2024) ಜೆರಾಕ್ಸ್ ಪ್ರತಿಯನ್ನು ತಂದಲ್ಲಿ ಮರು ನೊಂದಾವಣೆ ಮಾಡಿ ಕೊಡಲಾಗುವುದು.
ಪ್ರತಿ ವರ್ಷದಂತೆ ಆರೋಗ್ಯ ಸುರಕ್ಷಾ ಕಾರ್ಡುಗಳಿಗೆ ಆಯಾ ಸಂಘಗಳ ಸಂಯೋಜಕರನ್ನು ನೊಂದಾವಣೆ ದಿನಾಂಕದ ಬಗ್ಗೆ ಸಂಪರ್ಕಿಸುವುದು ಸೂಕ್ತ.
ಹೆಚ್ಚಿನ ಮಾಹಿತಿಗಾಗಿ ಸುರೇಶ್ ನಾಯ್ಕ್ ಮಾಣಿಬೆಟ್ಟು 9844616316 ಸಂಪರ್ಕಿಸಬಹುದು