ಉಡುಪಿ ಸವಿತಾ ಸಮಾಜ ವಿ.ಸೌಹಾರ್ದ ಸ.ಸಂಘ- ರಕ್ತ ಪರೀಕ್ಷಾ ಕೇಂದ್ರ ಉದ್ಘಾಟನೆ

ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ ಎನ್‌ಎಚ್ 66 ಸಮೀಪದಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಗೊಂಡ ರಕ್ತ ಪರೀಕ್ಷಾ ಕೇಂದ್ರ ’ಸವಿತಾ ಡಯಾಗ್ನೋಸ್ಟಿಕ್ ಸೆಂಟರ್’ (ಕ್ಲಿನಿಕಲ್ ಲ್ಯಾಬೋರೇಟರಿ)ಯನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಾತಿ ಸಂಘಟನೆ ಗಟ್ಟಿ ಗೊಳಿಸುವುದರ ಜತೆಗೆ ಹಿಂದೂ ಸಮಾಜ ಸದೃಢಗೊಳಿ ಸುವುದು ಇಂದಿನ ಅಗತ್ಯ. ಸವಿತಾ ಸಮಾಜ ಸಣ್ಣ ಸಮುದಾಯವಾಗಿದ್ದರೂ ಸಮಾಜ ಹಾಗೂ ದೇಶಕ್ಕೆೆ ತನ್ನದೆ ಆದ ಕೊಡುಗೆ ನೀಡಿದ ದೇಶ ಭಕ್ತ ಸಮಾಜವಾಗಿದೆ ಎಂದರು.

ಜಿಲ್ಲಾ ಸರಕಾರಿ ಆಸ್ಪತ್ರೆೆ ಸರ್ಜನ್ ಡಾ ಎಚ್. ಅಶೋಕ್ ಮಾತನಾಡಿ, ಉತ್ತಮ ಆರೋಗ್ಯ ಸರ್ವ ಸಮಾಜದ ಆಸ್ತಿಯಾಗಿದ್ದು, ವೈದ್ಯಯಕೀಯ ಕ್ಷೇತ್ರದಲ್ಲಿ ವೈದ್ಯ ಡಯಾಗ್ನೋಸ್ಟಿಕ್ ಅನ್ನು ಅವಲಂಬಿಸಬೇಕಾಗಿ ಬರುತ್ತದೆ.

ಗ್ರಾಮೀಣ ಭಾಗದಲ್ಲಿ ಸವಿತಾ ಸಮಾಜದ ಸೇವೆ ಅನಾರೋಗ್ಯ ಮುಕ್ತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಲಿದೆ ಎಂದರು. ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಅಂಬಲಪಾಡಿ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಣಿಪಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಚಳುವಳಿಯಲ್ಲಿ ಪ್ರಥಮ ಬಾರಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಗೊಂಡಿದೆ.

ಈ ಸೆಂಟರ್ ಸಮುದಾಯದ ಆರೋಗ್ಯದ ಮೇಲೆ ಗಮನಹರಿಸಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಕೇಂದ್ರವಾಗಿ ಸಹಕಾರಿಯಾಗ ಲಿದೆ ಎಂದರು. ಮುಖ್ಯ ಅತಿಥಿಯಾಗಿ ನಗರಸಭೆ ಸದಸ್ಯ ಹರೀಶ್ ಶೆಟ್ಟಿ, ರಾಯಚೂರು ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಜಯ ಭಾಸ್ಕರ್ ಇಡಗಿ, ದ.ಕ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಆನಂದ ಭಂಡಾರಿ, ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ ಭಂಡಾರಿ, ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ಜಿಲ್ಲಾಧ್ಯಕ್ಷ ಶಂಕರ್ ಸಾಲಿಯಾನ್, ಭಂಡಾರಿ ಸಮಾಜ ಸಂಘ ಅಧ್ಯಕ್ಷ ಗುರುದಾಸ್ ಭಂಡಾರಿ, ಜಿಲ್ಲಾ ಸವಿತಾ ಸಮಾಜ ಜಿಲ್ಲಾ ಪ್ರ. ಕಾರ್ಯದರ್ಶಿ ಸದಾಶಿವ ಬಂಗೇರ, ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ, ಸೌಹಾರ್ಧ ಸಹಕಾರಿಯ ಸಿಇಒ ಮಾಲತಿ ಅಶೋಕ್ ಭಂಡಾರಿ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಸನ್ಮಾನಿಸಲಾಯಿತು. ಪೂರ್ಣಿಮಾ ಭಂಡಾರಿ ಸನ್ಮಾನ ಪತ್ರ ವಾಚಿಸಿದರು. ಗೌರವಾಧ್ಯಕ್ಚ ಗೋವಿಂದ ಭಂಡಾರಿ ಬನ್ನಂಜೆ ಪ್ರಸ್ತಾವನೆಗೈದರು. ಸತ್ಯವತಿ ನಾಗೇಶ್ ಕಾಪು, ಸ್ವಾಗತಿಸಿ, ಮಂಜುನಾಥ ಭಂಡಾರಿ ಪಡುಕೆರೆ ನಿರೂಪಿಸಿದರು. ಸವಿತಾ ಸಮಾಜ ವಿ.ವಿ. ಸೌಹಾರ್ಧ ಸಹಕಾರಿ ಸಂಘದವರು, ಸಿಬಂದಿ, ಜಿಲ್ಲೆೆಯ ಸವಿತಾ ಸಮಾಜದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!