ಕೋಟ: ನ.19ರಂದು ಶ್ರೀ ಅಮೃತೇಶ್ವರಿ “ಕರಾವಳಿ ಹೋಲ್ ಸೇಲ್ ಫಿಶ್ ಸೆಂಟರ್” ಶುಭಾರಂಭ
ಉಡುಪಿ (ಉಡುಪಿ ಟೈಮ್ಸ್ ವರದಿ) : ಕರಾವಳಿ ಭಾಗದ ಜನರಿಗೆ ಮೀನೆಂದರೆ ಪಂಚಪ್ರಾಣ. ಮೀನುಗಾರರು ಹಿಡಿಯುವ ವಿವಿಧ ಬಗೆಯ ಮೀನುಗಳನ್ನು ಖರೀದಿಸಲು ಇಲ್ಲಿಯ ಜನತೆ ಮುಗಿ ಬೀಳುತ್ತಾರೆ. ಇದೀಗ ಮೀನು ಪ್ರಿಯರಿಗೆ ಶುಭ ಸುದ್ದಿಯೊಂದು ಬಂದಿದೆ. ಶ್ರೀ ಅಮೃತೇಶ್ವರಿ ‘ಕರಾವಳಿ ಹೋಲ್ ಸೇಲ್ ಫಿಶ್ ಸೆಂಟರ್’ ನವೆಂಬರ್ 19 ರಿಂದ ಉಡುಪಿ ಕುಂದಾಪುರದ ಕೋಟದಲ್ಲಿ ಶುಭಾರಂಭಗೊಳ್ಳಲಿದ್ದು, ಮೀನು ಪ್ರಿಯರಿಗೆ ತಾಜಾ ತಾಜಾ ಹಸಿ ಮೀನುಗಳನ್ನು ವಿಶೇಷ ದರದಲ್ಲಿ ನೀಡಲು ಸಿದ್ಧಗೊಂಡಿದೆ. ಶುಭ ಸಮಾರಂಭಗಳಿಗೆ ಗ್ರಾಹಕರಿಗೆ ಬೇಕಾಗುವ ಎಲ್ಲಾ ತರಹದ ಮೀನುಗಳು ಲಭ್ಯವಿದ್ದು, ಹೋಮ್ ಡೆಲಿವರಿ ವ್ಯವಸ್ಥೆಯನ್ನು ಮಾಡಲಾಗುವುದು. ಇಲ್ಲಿ ಮೀನಿನ ರುಚಿಕರವಾದ ಖಾದ್ಯಗಳನ್ನು ತಯಾರಿಸಲು ಎಲ್ಲಾ ತರಹದ ಹಸಿ ಮತ್ತು ಒಣ ಮೀನಿನ ಮಸಾಲಗಳು ಆಕರ್ಷಕ ದರದಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗ್ರಾಹಕರಿಗೆ ಅತ್ಯುನ್ನತ ಸೇವೆ ನೀಡಲು ಕೋಟದ ವರುಣತೀರ್ಥ ಕೆರೆಯ ಬಳಿಯ ಸ್ವಪ್ನಾ ಕಾಂಪ್ಲೆಕ್ಸ್ ನಲ್ಲಿ ನವೆಂಬರ್ 19ರಂದು ಶ್ರೀ ಅಮೃತೇಶ್ವರಿ ಕರಾವಳಿ ಹೋಲ್ ಸೇಲ್ ಫಿಶ್ ಸೆಂಟರ್ ಶುಭಾರಂಭಗೊಳ್ಳಲಿದೆ. ತಾಜಾ ಹಾಗೂ ಹಸಿ ಮೀನುಗಳು ಇಲ್ಲಿ ಲಭ್ಯವಿದ್ದು, ರುಚಿಕರವಾದ ಹಾಗೂ ಉತ್ತಮ ದರ್ಜೆಯ ಮೀನಿನ ಮಸಾಲಗಳು ಮೀನು ಪ್ರಿಯರಿಗೆ ದೊರೆಯಲಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಮೀನು ಪ್ರಿಯರಿಗೆ ಶ್ರೀ ಅಮೃತೇಶ್ವರಿ ಕರಾವಳಿ ಹೋಲ್ ಸೇಲ್ ಫಿಶ್ ಸೆಂಟರ್ ವಿಶೇಷ ಆಫರ್ ನೀಡಿದ್ದು, ಆಯ್ದ ಮೀನುಗಳಿಗೆ 1 ಕೆಜಿಗೆ 1/2 ಕೆಜಿ ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಅವಿನಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ : ಶ್ರೀ ಅಮೃತೇಶ್ವರಿ ಕರಾವಳಿ ಹೋಲ್ ಸೇಲ್ ಫಿಶ್ ಸೆಂಟರ್ ಸಪ್ನಾ ಕಾಂಪ್ಲೆಕ್ಸ್, ವರುಣತೀರ್ಥ ಕೆರೆಯ ಬಳಿ, ಕೋಟ.ಮೊ. 9008188340 |