ಮೂಡುಬೆಳ್ಳೆ-ಪಳ್ಳಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ಆಗ್ರಹ
ಕಾರ್ಕಳದ ಪಳ್ಳಿ-ಮೂಡುಬೆಳ್ಳೆ ರಸ್ತೆಯಲ್ಲಿ ಗುಂಡಿಗಳು
ಬಾಯ್ತೆರೆದುಕೊಂಡು ವಾಹನಗಳ ಸಂಚಾರಕ್ಕೆ ದುಸ್ತರವಾಗಿದೆ.
“ಇತ್ತೀಚಿಗಷ್ಟೇ ರಸ್ತೆಗೆ ತೇಪೆ ಹಾಕಲಾಗಿದ್ದು ಕಳೆದ ಮಳೆಗಾಲದ ನಂತರ ರಸ್ತೆ ಮತ್ತೆ ಹೊಂಡಮಯವಾಗಿದೆ. ಬೃಹತ್ ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ವಾಹನಗಳ ಬಿಡಿಭಾಗಗಳ ಕಿತ್ತು ಹೋಗುತ್ತಿದೆ. ಶೀಘ್ರವಾಗಿ ರಸ್ತೆಯನ್ನು ಸಂಪೂರ್ಣ ಮರು ಡಾಮರೀಕರಣ ಮಾಡಬೇಕಾಗಿ ನಮ್ಮ ಆಗ್ರಹವಾಗಿದೆ.
ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ವಾಹನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಅನೇಕ ವಾಹನಗಳು ಪಳ್ಳಿ, ನಾಲ್ಕುಬೀದಿ ಮೂಲಕ ಮಣಿಪಾಲ ಉಡುಪಿ ಕಡೆಗೆ ಸಂಚರಿಸುತ್ತಿವೆ. ಆದ್ದರಿಂದ ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ.