ಉಡುಪಿ: ಠಸೆ ವೆಂಡರ್ ಅಣ್ಣಾಜಿ ನಿಧನ
ಉಡುಪಿ: ಸೂರಾಲು ಮಡಿ ನಿವಾಸಿ ಠಸೆ ವೆಂಡರ್ ಅಣ್ಣಾಜಿ (89) ಅವರು ಜ.5ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಉಡುಪಿಯ ಗೀತಾಂಜಲಿ ಚಿತ್ರ ಮಂದಿರದ ಸಮೀಪ ವಾಸವಿದ್ದು, ತದನಂತರದಲ್ಲಿ ಇಂದ್ರಾಳಿಯಲ್ಲಿ ನೆಲೆಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸುಮಾರು 35 ವರ್ಷಗಳ ಕಾಲ ಠಸೆ ವೆಂಡರ್ ಆಗಿ ಸೇವೆ ಸಲ್ಲಿಸಿ, ನ್ಯಾಯವಾದಿಗಳಿಗೆ ಚಿರಪರಿಚಿತರಾಗಿದ್ದರು. ನಗರ ಟೌನ್ ಕೋ ಅಪರೇಟಿವ್ ಬ್ಯಾಂಕಿನಲ್ಲಿ 30 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.