ಕುಂದಾಪುರ ವಿಧಾನಸಭಾ ಕ್ಷೇತ್ರ: ಜೆಡಿಎಸ್ ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೆ. ಆಯ್ಕೆ

ಉಡುಪಿ: ಜನತಾದಳ (ಜಾತ್ಯತೀತ) ಪಕ್ಷದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರನ್ನಾಗಿ ಕಿಶೋರ್ ಕುಮಾರ್ ಕೆ. ರನ್ನು , ರಾಜ್ಯಾಧ್ಯಕ್ಷರಾದ ಎಚ್. ಕೆ. ಕುಮಾರಸ್ವಾಮಿಯವರ ಅನುಮೋದನೆಯೊಂದಿಗೆ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ನೇಮಕಾತಿಯ ಆದೇಶ ಹೊರಡಿಸಿರುತ್ತಾರೆ. 

ಕಿಶೋರ್ ಕುಮಾರ್ ಜನತಾ ಪರಿವಾರದ ಸಂದರ್ಭ “ಅಕ್ರಮ ಸಕ್ರಮ ಸಮಿತಿ” ಸದಸ್ಯರಾಗಿದ್ದು, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಚುನಾಯಿತ ಸದಸ್ಯರಾಗಿ , ಶ್ರೀರಾಮ್ ಕ್ರೆಡಿಟ್ ಸೊಸೈಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!