ಜ.11-14: ಮಲ್ಪೆ ಕಡಲ ಕಿನಾರೆಯಲ್ಲಿ “ಮಲ್ಪೆ ಫುಡ್ ಫೆಸ್ಟ್”
ಮಲ್ಪೆ ಜ.04(ಉಡುಪಿ ಟೈಮ್ಸ್ ವರದಿ): ಪರಶುರಾಮ ಫ್ರೆಂಡ್ಸ್ ಮಲ್ಪೆ ಇದರ ವತಿಯಿಂದ ಪ್ರವಾಸಿಗರನ್ನು ಸೆಳೆಯಲು “ಮಲ್ಪೆ ಫುಡ್ ಫೆಸ್ಟ್” ಎಂಬ ಆಹಾರೋತ್ಸವ ಕಾರ್ಯಕ್ರಮವನ್ನು ಜ.11 ರಿಂದ 14 ರವರೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿದೆ.
ಈ ನಾಲ್ಕು ದಿನವೂ ಉಡುಪಿಯ ವಿವಿಧ ಖಾದ್ಯಗಳನ್ನು ಸವಿಯಲು ಆಹಾರೋತ್ಸವ ನಡೆಯಲಿದೆ. ಮಲ್ಪೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ಲ್ಯಾಟಿನ್ ಫೆಸ್ಟಿವಲ್ (ಲ್ಯಾಟೀನ್ ಹಬ್ಬ) ವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸಾವಿರಕ್ಕೂ ಹೆಚ್ಚು ಲ್ಯಾಟಿನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುವುದು.
ಮಾತ್ರವಲ್ಲದೆ ಪ್ರತಿನಿತ್ಯ ಲೈವ್ ಮ್ಯೂಸಿಕ್, ಡ್ಯಾನ್ಸ್, ಸುಡುಮದ್ದು ಪ್ರದರ್ಶನಗೊಳ್ಳಲಿದೆ. ಇಷ್ಟು ಮಾತ್ರವಲ್ಲದೆ ಚೀನಾದ ಬೃಹತ್ ಲಯನ್ ವಿಶೇಷ ಆಕರ್ಷಣೀಯ ಆಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8970305000 ಅಥವಾ 9036638898 ದೂ. ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.