ಜ.5: ಲಯನ್ಸ್ ಸಂಗಮ ‘ಏಕತಾ-2025’ ಸಂಭ್ರಮ
ಉಡುಪಿ: ಲಯನ್ಸ್ ಜಿಲ್ಲೆ 317 ಸಿ ಹಾಗೂ ಲಯನ್ಸ್ ಜಿಲ್ಲೆ 317 ಡಿ ಇವುಗಳ ನಡುವಿನ ಸಾಂಸ್ಕೃತಿಕ ಸಂಬಂಧದ ಕೊಂಡಿಯಾದ ಲಯನ್ಸ್ ಸಂಗಮ ಈ ಬಾರಿ ‘ಏಕತಾ-2025’ ಹೆಸರಿನಲ್ಲಿ ಜನವರಿ 5ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ.
ಎರಡೂ ಲಯನ್ಸ್ ಜಿಲ್ಲೆಗಳ 600ಕ್ಕೂ ಅಧಿಕ ಲಯನ್ಸ್ ಸದಸ್ಯರು ಹಾಗೂ ಲಿಯೊ ಕ್ಲಬ್ ಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 2 ಜಿಲ್ಲೆಗಳ ಲಯನ್ಸ್ ತಂಡಗಳ ನಡುವೆ ನೃತ್ಯ, ನೃತ್ಯರೂಪಕ, ಕಿರು ನಾಟಕಗಳನ್ನೊಳಗೊಂಡ ಆರೋಗ್ಯಕರ ಸ್ಪರ್ಧೆ ನಡೆಯುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಜೊತೆಗೆ ಈ ಬಾರಿ ಲಿಯೋ ಸದಸ್ಯರ ಸಾಂಸ್ಕೃತಿಕ ಪ್ರತಿಭೆಗಳ ಪ್ರದರ್ಶನವೂ ನಡೆಯಲಿದ್ದು, ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮುಖ್ಗ ಅತಿಥಿಯಾಗಿ ಕೆ. ಎಂ. ಶೆಟ್ಟಿ ಭಾಗವಹಿಸಲಿದ್ದು, ಲಯನ್ಸ್ ಜಿಲ್ಲೆ 317 ಸಿಯ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಮತ್ತು 317 ಡಿ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿ ಜಂಟಿಯಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿರುವರು.
ಪ್ರಥಮ ಉಪ ಜಿಲ್ಲಾ ಗವರ್ನರ್‌ಗಳಾದ ಸಪ್ನಾ ಸುರೇಶ್, ಕುಡ್ಪಿ ಅರವಿಂದ್ ಶೆಣೈ, ದ್ವಿತೀಯ ಉಪ ಜಿಲ್ಲಾ ಗವರ್ನರ್‌ಗಳಾದ ರಾಜೀವ ಕೋಟ್ಯಾನ್ ಹಾಗೂ ಎಚ್. ಎಂ. ತಾರಾನಾಥ್ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಗಮ ಕಾರ್ಯಕ್ರಮದ ಚೀಫ್ ಕಾರ್ಡಿನೇಟರ್ ಗಳಾಗಿ ರಾಜೇಶ್ ಶೆಣೈ ಕಾರ್ಕಳ, ಗಣೇಶ್ ಶೆಟ್ಟಿ, ವರ್ವಾಡಿ ಪ್ರಸಾದ್ ಶೆಟ್ಟಿ, ಹೃಷಿಕೇಶ್ ಹೆಗ್ಡೆ ಹಾಗೂ ಅಲೆವೂರು ದಿನೇಶ್ ಕಿಣಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನಗಳು, ಲಕ್ಕಿ ಲಯನ್ ಇತ್ಯಾದಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.