ಉದ್ಯಾವರ ಗ್ರಾಮೀಣ ಕಾಂಗ್ರೆಸ್: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ ಶ್ರದ್ಧಾಂಜಲಿ ಸಭೆ

ಉಡುಪಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರ ಶ್ರದ್ಧಾಂಜಲಿ ಸಭೆ ಗುರುವಾರ ಲಯನ್ಸ್ ಕ್ಲಬ್ ಉದ್ಯಾವರ ಸಭಾಂಗಣದಲ್ಲಿ ನಡೆಯಿತು

ನೂತನ ಅಧ್ಯಕ್ಷ ನಿತಿನ್ ಜೆ ಸಾಲಿಯನ್ ಮಾತನಾಡಿ 2004ರಲ್ಲಿ ಪ್ರಧಾನಿ ಹುದ್ದೆಗೇರಿದ್ದ ಸಿಂಗ್ ಅವರು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಂಬಂಧಗಳನ್ನು ವೃದ್ಧಿಗೊಳಿಸಿದ ಇವರು ದೇಶದ ಚರಿತ್ರೆಯಲ್ಲಿ ಇವರ ಕೊಡುಗೆ ಅಚ್ಚಳಿಯದೆ ಉಳಿಯಲಿದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ಮುಖಂಡರಾದ ರಮೇಶ್ ಕುಮಾರ್ ಮಾತನಾಡಿ ದೇಶವು ದುರಿತ ಕಾಲದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿ ರಾಜಕಾರಣ ಪ್ರವೇಶಿಸಿದರು. ತಮ್ಮ ಮೊದಲ ಬಜೆಟ್‌ನಲ್ಲಿ ಅರು ಜಾರಿಗೆ ತಂದ ಆರ್ಥಿಕ ಸುಧಾರಣೆ ಕ್ರಮಗಳು, ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸಿದವು. ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಭದ್ರ ಅಡಿಪಾಯ ಹಾಕಿದ ಮುತ್ಸದ್ಧಿ ರಾಜಕಾರಣಿಯಾಗಿದ್ದರು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಗ್ರಾಮೀಣ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಗಿರೀಶ್ ಕುಮಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಸಂದೀಪ್ ಸದಸ್ಯರಾದ ಗಿರೀಶ್ ಸುವರ್ಣ ಜುಡಿತ್ ಪೀರೆರಾ. ಆಶಾ ವಾಸು. ಆಶಾ ಸುರೇಶ್, ರಮೇಶ್ ಕುಮಾರ್, ಕಿರಣ್ ಕುಮಾರ್ ಉದ್ಯಾವರ, ರೋಯ್ಸ್
ಫರ್ನಾಂಡಿಸ್ ಸುಹೇಲ್ ರಹಮತ್ತುಲ್ಲ, ಗಿರೀಶ್ ಗುಡ್ಡೆ ಅಂಗಡಿ, ಸಚಿನ್ ಜೆ ಸಾಲಿಯನ್, ಅನ್ಸರ್ ಸತ್ತರ್, ಸತೀಶ್ ಸಾಲಿಯಾನ್, ಸುಧಾಕರ್, ಸರೋಜಾ ಅನೂಪ್, ಪುಷ್ಪ, ಪ್ರತಾಪ್ ಕುಮಾರ್, ಸಂದೀಪ್ ಸಾಲಿಯಾನ್, ವಿಶ್ವನಾಥ್, ಅಬಿದ್ ಅಲಿ ಉದ್ಯಾವರ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!