ಗಂಗೊಳ್ಳಿ ಪಂಚಾಯತ್ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಬಿಜೆಪಿಯಿಂದ ಅಪಪ್ರಚಾರ: ಎಸ್ಡಿಪಿಐ

Oplus_131072

ಗಂಗೊಳ್ಳಿ: ಕೈಲಾಗದ ಶತ್ರುವಿನ ಕೊನೆಯ ಅಸ್ತ್ರ ಅಪಪ್ರಚಾರ ಎಂಬ ಮಾತಿನಂತೆ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಕಂಡು ಅಧಿಕಾರವನ್ನು ಕಳೆದುಕೊಂಡಿರುವ ಬಿಜೆಪಿ ಹತಾಶೆಯಿಂದ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಮಾಜ್ ಮಾಡಲಾಗಿದೆ ಎಂಬ ಅಪಪ್ರಚಾರದಲ್ಲಿ ತೊಡಗಿದೆ.

ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗೆದ್ದಂತಹ ಜನಪ್ರತಿನಿಧಿಗಳು ತಮ್ಮ ಕಚೇರಿಗಳನ್ನು ಉಧ್ಘಾಟನೆ ಮಾಡುವ ಸಂದರ್ಭದಲ್ಲಿ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಪೂಜೆ ಪುರಸ್ಕಾರಗ ಳನ್ನು ನಡೆಸುತ್ತಾರೆ. ಈ ಬಾರಿ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತಿ ಕಾರ್ವಿ ಗಣಹೋಮ ಮಾಡುವ ಮೂಲಕ ತಮ್ಮ ಕಚೇರಿ ಉಧ್ಘಾಟಿಸಿದರೆ, ಉಪಾಧ್ಯಕ್ಷರಾಗಿ ಆಯ್ಕೆಯಾದ ತಬ್ರೇಜ್ ರವರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದ್ದರು. ಇದ್ದನ್ನೇ ಮಹಾ ಅಪರಾದವೆಂಬಂತೆ ಬಿಂಬಿಸುವ ಮೂಲಕ ಬಿಜೆಪಿ ಗಂಗೊಳ್ಳಿಯ ಸೌಹಾರ್ದತೆಯನ್ನು ಕೆಡಿಸಲು ಪ್ರಯತಿಸುತ್ತಿದೆ. ಬೈಂದೂರ್ ಶಾಸಕರಾದ ಗುರುರಾಜ್ ಘಂಟಿಹೊಳೆಯವರು ಈ ಅಪಪ್ರಚಾರಕ್ಕೆ ನೇತೃತ್ವ ನೀಡಿದ್ದು ದುರಂತವೇ ಸರಿ.

ಕಳೆದ 20 ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ನಡೆಸಿದ್ಧ ಬಿ ಜೆ ಪಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಕೋಮು ಹಾಗೂ ದ್ವೇಷ ರಾಜಕಾರಣ ಮಾಡಿದ ಪರಿಣಾಮ ಈ ಬಾರಿ ಗಂಗೊಳ್ಳಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಯನ್ನು ಜನರು ಸೋಲಿಸಿ ಮನೆಗೆ ಕಳುಹಿಸಿದ್ದರು. ಆದರೂ ತನ್ನ ತಪ್ಪುಗಳಿಂದ ಪಾಠ ಕಲಿಯದ ಬಿಜೆಪಿ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿ ಈ ಅಪಪ್ರಚಾರದಲ್ಲಿ ತೊಡಗಿದೆ ಇದು ಹೇಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನತೆ ಬೈಂದೂರ್ ಕ್ಷೇತ್ರದಿಂದಲೇ ಬಿಜೆಪಿಯನ್ನು ಮೂಲೆಗುಂಪು ಮಾಡಲಿದ್ದಾರೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ನ ನೂತನ ಉಪಾಧ್ಯಕ್ಷ ತಬ್ರೇಜ್ ಗಂಗೊಳ್ಳಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!