ಮಲ್ಪೆ: ಮೀನುಗಾರ ಮಹಿಳೆಯ 2ಲಕ್ಷ ಮೌಲ್ಯದ ಚಿನ್ನದ ಸರ ಕಸಿದು ಪರಾರಿ
ಮಲ್ಪೆ: ಮೀನು ಖರೀದಿಸಲು ಮನೆಯಿಂದ ಹೊರಟ ಮೀನುಗಾರ ಮಹಿಳೆಯೊರ್ವರ ಚಿನ್ನದ ಸರವನ್ನು ಸೆಳೆದು ಪರಾರಿಯಾದ ಘಟನೆ ಮಂಗಳವಾರ ಮುಂಜಾನೆ ಪಡುಕೆರೆ ಬಳಿ ನಡೆದಿದೆ.
ಕಿದಿಯೂರಿನ ಯಮುನ (65) ಎಂಬವರು ಮುಂಜಾನೆ 4.40 ಗಂಟೆಗೆ ಮೀನು ಮಾರಾಟಕ್ಕಾಗಿ, ಮಲ್ಪೆ ಬಂದರಿಗೆ ಖರೀದಿಗಾಗಿ ಮನೆಯಿಂದ ಪಡುಕೆರೆ ರಸ್ತೆಯ ಕಡೆಗೆ ಹೊರಟು ತೋಟದಲ್ಲಿ ನಡೆದುಕೊಂಡು ಬರುತ್ತಿರುವಾಗ ಅಪರಿಚಿತನೊರ್ವ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಯತ್ನಿಸಿದ್ದ.
ಈ ಸಂದರ್ಭ ಪ್ರತಿರೋಧ ಮಾಡಿದಾಗ ಯಮುನರನ್ನು ನೆಲಕ್ಕೆ ದೂಡಿ ಹಾಕಿ ಸರವನ್ನು ದುಷ್ಕರ್ಮಿ ಎಳೆದುಕೊಂಡು ಓಡಿ ಹೋಗಿರುತ್ತಾನೆ. ಬಳಿಕ ಮಹಿಳೆ ಎದ್ದು ನೋಡಿದಾಗ ಪಕ್ಕದಲ್ಲಿ ಇದ್ದ ಸ್ಕೂಟರಿನಲ್ಲಿ ಮಲ್ಪೆ ಕಡೆಗೆ ಕಳ್ಳನು ಪರಾರಿಯಾಗಿರುತ್ತಾನೆ. ಕಿತ್ತುಕೊಂಡು ಹೋದ ಚಿನ್ನದ ಸರ 5.5 ಪವನ್ ತೂಕವಿದ್ದು, ಮೌಲ್ಯ ಸುಮಾರು ರೂಪಾಯಿ 1.95 ಲಕ್ಷ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.