ಉದ್ಯಾವರ ಹಿತ್ಲು ಮೊಗವೀರ ಗ್ರಾಮ ಸಭೆಯ ನೂತನ ಅಧ್ಯಕ್ಷರಾಗಿ ದಿನಕರ ಬಿ ಮೆಂಡನ್ ಆಯ್ಕೆ
ಉದ್ಯಾವರ ಹಿತ್ಲು ಮೊಗವೀರ ಗ್ರಾಮ ಸಭೆಯ ಮಹಾಸಭೆಯು ದತ್ತಾತ್ರೇಯ ಭಜನಾ ಮಂದಿರದಲ್ಲಿ ಜ.1ರಂದು ನಡೆಯಿತು.
2025-27ರ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ದಿನಕರ ಬಿ ಮೆಂಡನ್, ಉಪಾಧ್ಯಕ್ಷರಾಗಿ ಕಿರಣ್ ಕುಮಾರ್ ಉದ್ಯಾವರ, ಯು. ಗಣೇಶ್, ಪ್ರಧಾನ ಕಾರ್ಯದರ್ಶಿ ಚಂದ್ರೇಶ್ ಪಿತ್ರೋಡಿ, ಕೋಶಧಿಕಾರಿ ಚಂದ್ರಶೇಖರ ಮೈಂದನ್, ಜೊತೆ ಕಾರ್ಯದರ್ಶಿ ಹರ್ಷ ಮೈಂದನ್, ಸಮಿತಿ ಸದಸ್ಯರಾಗಿ ಅಜಿತ್ ಎ ಮೆಂಡನ್, ಐತಪ್ಪ ಕೋಟ್ಯಾನ್, ಮುರಳಿ ತಿಂಗಳಾಯ, ಶೇಖರ್ ಕುಂದರ್, ಪುರಂದರ ಸುವರ್ಣ, ವೈನಾಥೇಯ ಮೈಂದನ್, ಭುವನೇಶ್ ಮೆಂಡನ್, ನರೇಂದ್ರ ಮೆಂಡನ್, ಸದಾಶಿವ ಬಂಗೇರ, ಲಕ್ಷ್ಮಣ ಮೆಂಡನ್, ಜಿ ಏನ್ ಕೋಟ್ಯಾನ್, ಸುಂದರ ಕೋಟ್ಯಾನ್, ಉಮೇಶ್ ಸುವರ್ಣ, ಶೈಲೇಶ್ ಮೆಂಡನ್, ಉಪೇಂದ್ರ ಮೆಂಡನ್, ಜಗದೀಶ್ ಕುಮಾರ್, ವಾಮನ ಮೈಂದನ್, ಬಾಲಕೃಷ್ಣ ಯು, ಲಕ್ಷ್ಮಣ ಕರ್ಕೇರ,ದಯಾನಂದ ಸುವರ್ಣ, ಮಧುಕರ ಮೆಂಡನ್, ಸುರೇಶ್ ಕಾಂಚನ್ ರವರು ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಗ್ರಾಮಸಭೆಯ ಮಾಜಿ ಅಧ್ಯಕ್ಷರಾದ ಎಂ ಕೆ ಸೋಮನಾಥ್ ರವರಿಗೆ ಶೃದ್ದಾoಜಲಿ ಅರ್ಪಿಸಲಾಯಿತು. ಉದ್ಯಾವರ ಮೊಗವೀರ ಸಭಾ ಮುಂಬಯಿ ಸಮಿತಿಯ ಉಪಾಧ್ಯಕ್ಷರಾದ ಕೆ ಪಿ ಸಾಲ್ಯಾನ್ ಉಪಸ್ಥಿತರಿದ್ದರು.