ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಯ ಯಾವ ನಾಯಕರಿಗೂ ಇಲ್ಲ- ಸುರೇಶ್ ಶೆಟ್ಟಿ

ಉಡುಪಿ: ಈ ಬಿಜೆಪಿ ನಾಯಕರುಗಳು ಇಡೀ ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಂ.1ಸ್ಥಾನದಲ್ಲಿದ್ದಾರೆ ಬಿಜೆಪಿ ಎಂದರೆ ಭ್ರಷ್ಟ ಜನರ ಪಾರ್ಟಿ ಎಂದು ಈಗಾಗಲೇ ಸಾಬೀತಾಗಿದೆ. ಈ ಹಿಂದಿನ ರಾಜ್ಯದ ಆಡಳಿತ ನಡೆಸಿದಂತಹ ಬಿಜೆಪಿ ನಾಯಕರುಗಳು ರಾಜ್ಯವನ್ನು ರಾಜ್ಯದ ಖಜಾನೆಯನ್ನು ದಿವಾಳಿಗೊಳಿಸಿ ಗುಡಿಸಿ ಸ್ವಚ್ಛ ಗೊಳಿಸಿರುತ್ತಾರೇ ಇಂತಹ ಭ್ರಷ್ಟಾಚಾರಿಗಳು ನಮ್ಮ ರಾಜ್ಯದ ಒಬ್ಬ ನಿಷ್ಠಾವಂತ ಹಾಗೂ ದಲಿತ ಸಮಾಜದ ನಾಯಕ ರಾಜ್ಯದ ಸಚಿವ ಪ್ರಿಯಾಂಕ ಖರ್ಗೆ ಇವರ ರಾಜೀನಾಮೆಯನ್ನು ಕೇಳುತ್ತಿರುವುದು ಈ ಬಿಜೆಪಿ ನಾಯಕರ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿ.

ಆತ್ಮಹತ್ಯೆ ಮಾಡಿಕೊಂಡಂತಹ ಗುತ್ತಿಗೆದಾರ ಡೆತ್ ನೋಟ್ ನಲ್ಲಿ ಪ್ರಿಯಾಂಕ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೂ ಈ ಬಿಜೆಪಿಯವರು ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿ, ಅಮಿತ್ ಶಾ ರವರ ಅಂಬೇಡ್ಕರ್ ವಿರೋಧಿ ನೀತಿ, ನಿರ್ಮಲಾ ಸೀತಾರಾಮ್ ರವರು ಅಗತ್ಯ ವಸ್ತುಗಳ ಮೇಲೆಯು ಜಿಎಸ್‌ಟಿ ಹಾಕಿ ಜನಸಾಮಾನ್ಯರ ಲೂಟಿ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನು ಮರೆಮಾಚಲು ಅನಗತ್ಯವಾಗಿ ಪ್ರಿಯಾಂಕ ಖರ್ಗೆ ಅವರನ್ನು ಈ ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬ ದಲಿತ ನಾಯಕನ ಏಳಿಗೆ ಸಹಿಸಲಾಗದೆ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಈ ಬಿಜೆಪಿಯವರು ಸಂಪೂರ್ಣವಾಗಿ ದಲಿತರ ವಿರೋಧಿಗಳು ಎಂದು ಸಾಬೀತಾಗಿದೆ.

ಪ್ರಿಯಾಂಕ ಖರ್ಗೆ ಅವರ ಜೊತೆ ಕೋಟ್ಯಾಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆ ಎಂಬುದನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!