ಉಡುಪಿ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಉಡುಪಿ, ಡಿ.31: ಉಡುಪಿ ಡಯಾನ -ಎಂಜಿಎಂ ರಸ್ತೆಯ ಇಂದಿರಾನಗರ ಚರ್ಚ್ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮೌಲ್ಯದ ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಶಿರಸಿ ಸೋಂದೆ ವಾದಿರಾಜ ಮಠದ ಆಡಳಿತ ಅಧಿಕಾರಿಯಾಗಿರುವ ಮಧುಸೂದನ್ ಡಿ.22ರಂದು ಮನೆಗೆ ಬೀಗ ಹಾಕಿ ಸೋಂದೆಗೆ ಹೋಗಿದ್ದು, ಡಿ.30ರಂದು ಬೆಳಗ್ಗೆ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಮುಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟುಗಳ ಒಳಗೆ ಇಟ್ಟಿದ್ದ 51 ಗ್ರಾಂ ತೂಕದ ಸುಮಾರು 76,000ರೂ. ಮೌಲ್ಯದ ಚಿನ್ನಾಭರಣಗಳು ಹಾಗು 1.69 ಕೆಜಿ ತೂಕದ 64,600ರೂ. ಮೌಲ್ಯದ ಬೆಳ್ಳಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”