ಉಡುಪಿ: ಕೆನರಾ ಬ್ಯಾಂಕ್‌ನ ಉಷಾ ಭಟ್ ಬೀಳ್ಕೊಡುಗೆ
ಉಡುಪಿ: ಕೆನರಾ ಬ್ಯಾಂಕಿನ ವಿವಿಧ ಶಾಖೆಯಲ್ಲಿ 40 ವರ್ಷ ಸೇವೆ ಸಲ್ಲಿಸಿರುವ ಅಂಬಲಪಾಡಿ ಉಷಾ ಭಟ್ ಇಂದು ಉಡುಪಿ ಮಾರುತಿ ವೀಥಿಕಾ ಶಾಖೆಯಲ್ಲಿ ನಿವೃತ್ತಿ ಹೊಂದಿರುತ್ತಾರೆ.
ಶಾಖೆಯ ಸೀನಿಯರ್ ಮ್ಯಾನೇಜರ್ ಸಂತೋಷ್ ಎನ್.ಜಿ ಇವರು ನಿವೃತ್ತಿ ಹೊಂದಿರುವ ಉಷಾ ಭಟ್ ಮತ್ತು ಬಿ. ಪ್ರೇಮಾನಂದ್ ಭಟ್ ದಂಪತಿಗಳಿಗೆ ಶಾಲು ಹೊದಿಸಿ, ಫಲ-ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀರಾಗ್ ಪಿ.(ಮ್ಯಾನೇಜರ್), ನವೀನ್ ಎಸ್. ನಾಯ್ಕ್ (ಆಫೀಸರ್), ನೌಕರ ವೃಂದದವರಾದ ರಮೇಶ್ ಕೆ., ಸುಶ್ಮ ಕುಂದರ್, ಶಶಿಕಲ ಮತ್ತು ಉಷಾ ಭಟ್ ಅವರ ಕುಟುಂಬಸ್ಥರು ಹಾಗೂ ನಿವೃತ್ತ ಸಿಬ್ಬಂದಿಯವರಾದ ಎಂ.ಆರ್ ಪೈ ಉಪಸ್ಥಿತರಿದ್ದರು