ಉಡುಪಿ ನಗರಸಭೆಯ ಎದುರೇ ಪಾದಚಾರಿ ಮಾರ್ಗದ ಅವ್ಯವಸ್ಥೆ ನೋಡಿ….
ಉಡುಪಿ, ಡಿ25: (ಉಡುಪಿ ಟೈಮ್ಸ್ ವರದಿ) ನಗರಸಭೆ ಕಚೇರಿ ಮುಂಭಾಗವೇ ಜಲ್ಲಿ ಕಲ್ಲು ಹಾಗೂ ಜಲ್ಲಿಪುಡಿ ರಾಶಿ ಕಳೆದ 15 ದಿನಗಳಿಂದ ಇದ್ದು ಪಾದಾಚಾರಿಗಳು ಮುಖ್ಯರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ.
ನಗರದ ಎಲ್ಲೆಂದರಲ್ಲಿ ಫುಟ್ಪಾತ್‌ಗಳನ್ನು ಅತ್ತಿಕ್ರಮಿಸಿ ವಾಣಿಜ್ಯ ಮಾಳಿಗೆಗಳ ಬೋರ್ಡ್ ಒಂದೇ ಒಂದೆಡೆಯಾದರೆ, ಇನ್ನೊಂದೆಡೆ ಕಟ್ಟಡ ನಿರ್ಮಾಣ, ದುರಸ್ತಿ ಕಾರ್ಯಗಳಿಗೆ ತಂದು ಸುರಿಯುವ ಮರಳು, ಜಲ್ಲಿಕಲ್ಲುಗಳನ್ನು ಸುರಿದ ಕಾರಣ ಪಾದಾಚಾರಿಗಳು ಜೀವಭಯದಿಂದ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಇದಕ್ಕೆ ಇದಕ್ಕೆ ನಿದರ್ಶನ ಎಂಬಂತೆ ನಗರಸಭೆ ಮುಂಭಾಗವೇ ಜಲ್ಲಿಕಲ್ಲು ಹಾಗೂ ಜಲ್ಲಿಪುಡಿಗಳನ್ನು ಹಾಕಿರುವುದು. ನಗರಸಭೆಯ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ ಅಥವಾ ಪಾದಾಚಾರಿಗಳು ಎಂದರೆ ನಿರ್ಲಕ್ಷ ಭಾವನೆಯೇ ಎಂದು ತಿಳಿಯುತ್ತಿಲ್ಲ. ಇನ್ನಾದರೂ ಎಚ್ಚೆತ್ತು ನಗರಸಭೆ ಅಧಿಕಾರಿಗಳು ಇದನ್ನು ಶೀಘ್ರ ತೆರವುಗೊಳಿಸುವ ಕಾರ್ಯಕ್ಕೆ ಮುನ್ನಾಗಬೇಕು.