ಶಿರ್ವ: ಮನೆ ಹಸ್ತಾಂತರ ಮತ್ತು ದಿ.ಇಗ್ನೇಶಿಯಸ್ ಡಿಸೋಜ ಪುಣ್ಯಸ್ಮರಣೆ
ಶಿರ್ವ ಗ್ರಾಮೀಣ ಕಾಂಗ್ರೇಸ್ ವತಿಯಿಂದ ಗುಲಾಬಿ ಪೂಜಾರ್ತಿಯವರಿಗೆ ಕಟ್ಟಿಸಿದ ಹೊಸಮನೆ ವಾಸು ನಿಲಯ ಇದರ ಹಸ್ತಾಂತರ ಹಾಗೂ ದಿ. ಇಗ್ನೇಶಿಯಸ್ ಡಿಸೋಜರವರ ವರ್ಷದ “ಪುಣ್ಯಸ್ಮರಣೆ” ಕಾರ್ಯಕ್ರಮವು ಶಿರ್ವ ಮುಟ್ಲಪಾಡಿ ವಾರ್ಡ್, “ ಕೆರುಮನೆ” ಇಲ್ಲಿ ನಡೆಯಿತು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೊಸಮನೆ ಉದ್ಘಾಟನೆಯನ್ನು ನೆರವೆರಿಸಿದರು. ಶಿರ್ವ ಗ್ರಾಮೀಣ ಕಾಂಗ್ರೆಸ್, ಹಾಗೂ ಸರಕಾರದ ಬಸವ ವಸತಿ ಯೋಜನೆ ಹಾಗೂ ದಾನಿಗಳ ಸಹಕಾರದೊಂದಿಗೆ ಹೊಸಮನೆಯು ನಿರ್ಮಿಸಿಲಾಗಿದೆ. ವಿನಯ್ ಕುಮಾರ್ ಸೊರಕೆಯವರು ಮಾತನಾಡಿ ದಿ. ಇಗ್ನೇಶಿಯಸ್ ಡಿಸೋಜ ರವರು ಸದಾಕಾಲ ಬಡವರ, ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದು, ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದರು ಹಾಗೂ ಅವರ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಹೊಸಮನೆ ಹಸ್ತಾಂತರ ಕಾರ್ಯಕ್ರಮ ಅವರಿಗೆ ಸಂದ ಗೌರವ ಮತ್ತು ಪುಣ್ಯದ ಕೆಲಸ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ಎಂ.ಎ ಗಪೂರ್ ಮಾತನಾಡಿ ಹೊಸಮನೆ ಕಟ್ಟಿಸಿದ ಕೆಲಸ ಅತ್ಯಂತ ಶ್ಲ್ಲಾಘನೀಯ, ಮುಟ್ಲಪಾಡಿ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ದಿ. ಇಗ್ನೇಶಿಯಸ್ ಡಿಸೋಜ ರವರು ಈ ಭಾಗದಲ್ಲಿ ಮಾಡಿದ ಕೆಲಸ ಶಾಶ್ವತವಾಗಿ ನೆನಪಿಸುವಂತಾದಾಗಿದೆ. ಹಾಗೂ ಅವರು ಭೂನ್ಯಾಯ ಮಂಡಳಿ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಜನರಿಗೆ ನಿವೇಶನ ಮತ್ತು ಭೂಮಿಯ ಒಡೆತನ ಸಿಗಲು ಶ್ರಮಿಸಿದ್ದರು ಎಂದರು. ಮನೆ ಕಟ್ಟಲು ಸಹಕರಿಸಿದ ದಾನಿಗಳಿಗೆ ಹಾಗೂ ಕೆಲಸ ನಿರ್ವಹಿಸಿದವರನ್ನು ಮತ್ತು ಹಿರಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಮುಟ್ಲಪಾಡಿ ವಾರ್ಡ್ನ ರಾಷ್ಟç ಮಟ್ಟದ ತ್ರೋಬಾಲ್ ಆಟಗಾರ್ತಿ ಶಮಿತ ಪೂಜಾರಿ, ರಾಜ್ಯ ಮಟ್ಟದ ಪುಟ್‌ಬಾಲ್ ಆಟಗಾರ ಸೃಜನ್ ಕುಮಾರ್ ರವರನ್ನು ಅಭಿನಂದಿಸಲಾಯಿತು.
ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ಸಂಪೂರ್ಣ ಗೊಳಿಸಲು ಶ್ರಮಿಸಿದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜರವರನ್ನು ಕಾರ್ಯಕರ್ತರು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರತನ್ ಶೆಟ್ಟಿ, ಹಸನಬ್ಬ ಶೇಕ್, ರಮೇಶ್ ಬಂಗೇರ, ಜುಬೇರ್ ಆಲಿ, ದಾನಿಗಳಾದ ಮೆಲ್ವಿನ್ ಡಿಸೋಜ, ಪೀಟರ್ ಕೋರ್ಡ, ಮತಾಯಸ್ ಲೋಬೋ, ಶರ್ಪುದ್ದೀನ್ ಶೇಕ್, ಸುನೀಲ್ ಬಂಗೇರ, ಗೀತಾ ವಾಗ್ಳೆ, ಗ್ರೇಸಿ ಕಾರ್ಡೋಜ, ಅಮೀರ್ ಮೊಹಮ್ಮದ್, ಅಬ್ದುಲ್ ಲತೀಫ್, ಪಂಚಾಯತ್ ಸದಸ್ಯರಾದ ಸುಜಾತ, ರೇವತಿ ಆಚಾರ್ಯ, ಬೂತ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಸಂತೋಷ್ ಕರ್ಕೇರ, ಸುಧೀರ್ ಪೂಜಾರಿ, ಸಂದೀಪ್ ಕುಮಾರ್ ಹಾಜರಿದ್ದರು. ಶ್ರೀಮತಿ ಗುಲಾಬಿ ಪೂಜಾರ್ತಿ ಕುಟುಂಬಸ್ಥರು ಹಾಜರಿದ್ದರು. ಇಗ್ನೇಶಿಯಸ್ ಡಿಸೋಜ ಪತ್ನಿ ರೆಮೇಡಿಯಾ ಡಿಸೋಜ ಮತ್ತು ಕುಟುಂಬಸ್ಥರು ಹಾಜರಿದ್ದರು.