ಉಡುಪಿ: ಕುತ್ಪಾಡಿ ಕೋಳಿ ಅಂಕಕ್ಕೆ ದಾಳಿ- ನಾಲ್ವರು ವಶಕ್ಕೆ
ಉಡುಪಿ: ಕುತ್ಪಾಡಿ ಗ್ರಾಮದ ಕಾನಂಗಿ ಬ್ರಹ್ಮವಿಷ್ಣು ಮಹೇಶ್ವರ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದಾಗ ಉಡುಪಿ ನಗರ ಠಾಣಾ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದಾಗ ಕೋಳಿ ಅಂಕ ಆಟ ಅಡುತ್ತಿದ್ದ ಕುಮಾರ್, ಕೋರೋಹನ್ ಜೋವಿಯಲ್, ನವೀನ್, ರಕ್ಷಿತ್ ಇವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿದ್ದ ಹಲವು ಮಂದಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಆರೋಪಿಗಳ ವಶದಲ್ಲಿದ್ದ ಹಾಗೂ ಸ್ಥಳದಲ್ಲಿದ್ದ 9 ಕೋಳಿ ಮತ್ತು ಆಟಕ್ಕೆ ಬಳಿಸಿದ 550 ರೂ., ಕೋಳಿಬಾಳ್ ಮತ್ತು ದಾರಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.