ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ
ಕಾರ್ಕಳ: ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಗಳು ಜ್ಞಾನದ ಭಂಡಾರವಾಗಿದೆ,,ಕರಿಗಲ್ಲಿನ ನಾಡು ಕಾರ್ಕಳದಲ್ಲಿ ಶಿಕ್ಷಣ ಕ್ರಾಂತಿಯ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಎಂ.ಆರ್.ಜಿ. ಗ್ರೂಪ್‌ಗಳ ಸಂಸ್ಥಾಪಕ ಹಾಗೂ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಗಣಿತ ನಗರದ ಜ್ಞಾನಸುಧಾ ಕ್ಯಾಂಪಸ್ ನಲ್ಲಿ ನಡೆದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಸುಧಾಕರ ಶೆಟ್ಟಿ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣದ ಕ್ರಾಂತಿಗೆ ಕಾರಣಿಭೂತರಾಗಿದ್ದಾರೆ. ಶಿಕ್ಷಣದಲ್ಲಿ ಸಾಧಕರನ್ನು ಹೊರತರುವ ಮೂಲಕ ರಾಜ್ಯವೆನ್ನದೆ ದೇಶದ ಮನೆಮಾತಾಗುವಂತೆ ಮಾಡಿದೆ. ಶಿಕ್ಷಣ ವು ಪರಿಶ್ರಮದ ಮೂಲಕ ಸಾಧನೆಗೆ ಪ್ರೇರೇಪಣೆಯಾಗಲಿ, ಇಂದಿನ ಕಾರ್ಯ ಇಂದೆ ಮಾಡಿ ಮುಗಿಸಿ ,ನಾಳೆಗಾಗಿ ಮೀಸಲಿಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕ ಪ್ರಸನ್ನ ಹೆಚ್. ಐ.ಎ.ಎಸ್. ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯ ಪಾಲನೆ ಜೊತೆಗೆ ಸ್ಪರ್ಧೆ ಮುಖ್ಯವಾಗಿದೆ. ಇಂದಿನ ಸ್ಪರ್ಧತ್ಮಕ ಜಗತ್ತಿನಲ್ಲಿ ವಿಪುಲವಾದ ಅವಕಾಶಗಳಿವೆ ಅದರೆ ಅದನ್ನು ಉಪಯೋಗಿಸುವುದು ಮುಖ್ಯ ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ 4.5 ಲಕ್ಷ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದು 45000 ಅಭ್ಯರ್ಥಿಗಳು ಮಾತ್ರ ಪರಿಕ್ಷೆ ಪಾಸಾಗಿದ್ದಾರೆ . ಕಠಿಣ ಸ್ಪರ್ಧೆಗೆ ಪ್ರತಿಫಲ ಸಿಗುತ್ತದೆ ಎಂದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳು ರಾಜ್ಯದ ಆಸ್ತಿ ಯಾಗಿದ್ದು , ವಿದ್ಯಾರ್ಥಿ ಗಳು ವೈದ್ಯಕೀಯ ಸೀಟು ಪಡೆಯುತ್ತಿರುವ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಸಂತಸ ತಂದಿದೆ. ಇವೆಲ್ಲವೂ ಅಧ್ಯಕ್ಷ ರ ಹಾಗೂ ಸಿಬ್ಬಂದಿ ಗಳ ಸಂಘಟಿತ ಪ್ರಯತ್ನ ವಾಗಿದೆ. ವಿದ್ಯವಂತರನ್ನಾಗಿ ಮಾಡುವುದು ಸುಲಭ, ಅದರಲ್ಲೂ ಸಂಸ್ಕಾರ ವನ್ನು ಕಲಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವು ದು ಸಂತಿಸುತ್ತಿದೆ. ಭವಿಷ್ಯದ ಭಾರತ ನಿರ್ಮಿಸುವಲ್ಲಿ ವಿದ್ಯಾರ್ಥಿ ಗಳ ಪಾತ್ರ ಹಿರಿದಾಗಿದೆ ಎಂದರು.
ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ತಂದೆ ತಾಯಿಯ ತ್ಯಾಗ ಗಳು ವಿದ್ಯಾರ್ಥಿಗಳು ಅನುಕರಿಸಬೇಕು ಹಾಗೂ ಸಂಸ್ಥೆಯ ಪೂರ್ವ ವಿದ್ಯಾರ್ಥಿ ಐ.ಎಂಎಸ್. ಬನಾರಸ್, ವಾರಣಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಗೌತಮ್ ಭಟ್ ಎಂ.ಬಿ.ಬಿ.ಎಸ್. ಎಂ.ಎಸ್. ಎಂ.ಸಿಎಚ್.(ಸರ್ಜಿಕಲ್ ಆಂಕೋಲಜಿ) ಕಾಲೇಜಿನ ದಿನಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ 2024 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಅಡ್ವಾನ್ಸ್ ಮೂಲಕ ಐ ಐ ಟಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ಸ್ ಮೂಲಕ ಎನ್.ಐ.ಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, ನೀಟ್ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶ ಗಳಿಸಿದ 155 ವಿದ್ಯಾರ್ಥಿಗಳನ್ನು, ಸಿ. ಎ. ಫೌಂಡೇಶನ್‌ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು, ಹಾಗೂ ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.