ಡಿ.22: ಉದ್ಯಾವರ ಗ್ರಾಮೀಣ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನಿತಿನ್ ಜೆ ಸಾಲಿಯಾನ್ ಪದಗ್ರಹಣ ಸಮಾರಂಭ
ಉಡುಪಿ: ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಉದ್ಯಾವರ ಪಂಚಾಯತ್‌ನ ಸದಸ್ಯ, ಬಾಲಾಜಿ ಗ್ರೂಪಿನ ಪಾಲುದಾರರಾದ ನಿತಿನ್ ಜೆ ಸಾಲಿಯಾನ್ ಅವರ ಪದಗ್ರಹಣ ಸಮಾರಂಭ ಡಿ.22 ರ ಆದಿತ್ಯವಾರ ಸಂಜೆ 5:30ಕ್ಕೆ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ ಪಾರ್ಕಿಂಗ್ ವಠಾರದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಅಧ್ಯಕ್ಷ ಅಶೋಕ ಕೊಡವೂರು, ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಸಂತೋಷ ಕುಲಾಲ್, ಪಂಚಾಯತ್ ಅಧ್ಯಕ್ಷೆ ಮಾಲತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಮುಖಂಡರಾದ ಎಂ.ಎ.ಗಫೂರ್ ನಾಗೇಶ ಉದ್ಯಾವರ, ಗಿರೀಶ ಕುಮಾರ್, ರಾಯಿಸ್ ಫರ್ನಾಂಡೀಸ್, ಗಿರೀಶ್ ಗುಡ್ಡೆಯಂಗಡಿ, ಗಿರೀಶ್ ಸುವರ್ಣ ಉಪಸ್ಥಿತರಿರುವರು.