ಸಿ.ಟಿ ರವಿ ಒಳ್ಳೆಯ ಸಂಸ್ಕಾರ ಕಲಿಯಲಿ-ಶರ್ಪುದ್ದೀನ್ ಶೇಖ್
ಕಾಪು: ವಿಧಾನ ಪರಿಷತ್ ನಂತಹ ಘನತೆಯ ಶಾಸನಸಭೆಯಲ್ಲಿ ನಿಂತುಕೊಂಡು ಸಂಸ್ಕಾರ ರಹಿತವಾಗಿ ವರ್ತಿಸಿದ ಸಿ ಟಿ ರವಿ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಬಾಯಿ ತೆರೆದರೆ ಸಂಸ್ಕೃತಿ ಸಂಸ್ಕಾರದ ವಿಚಾರವನ್ನು ಮಾತನಾಡುತ್ತಲೇ ಮತದಾರರನ್ನು ಯಾಮಾರಿಸಿ ಪದವಿ ಪೀಠಗಳನ್ನು ಗಳಿಸಿಕೊಳ್ಳುವ ಬಿಜೆಪಿ ನಾಯಕರು ತಮ್ಮದೇ ಪಕ್ಷದ ಪರಿಷತ್ ಸದಸ್ಯನ ಸ್ತ್ರೀಯರ ಕುರಿತಾಗಿ ಅಶ್ಲೀಲ ಅವಹೇಳನಕಾರಿ ಮಾತುಗಳನ್ನು ಖಂಡಿಸದೇ ಬೆಂಬಲಿಸುತ್ತಿರುವುದು ನಾಚಿಕೆಗೇಡಿತನ ಕೃತ್ಯವಾಗಿದೆ.
ಕರ್ನಾಟಕದ ಶಾಸನ ಸಭೆ ಘನತೆ ಗೌರವದ ಸದನಗಳೆನ್ನುವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಇಂಥ ಹೆಗ್ಗಳಿಕೆ ಹೊಂದಿರುವ ಸದನದಲ್ಲಿ ಇಂತಹ ನೀಚ ಕೃತ್ಯ ಸಹ್ಯವಲ್ಲ. ಬಿಜೆಪಿ ನಾಯಕರು ಇಂತಹ ಕೃತ್ಯಗಳನ್ನು ಸಮರ್ಥಿಸದೆ ತಮ್ಮ ಸದಸ್ಯನಿಗೆ ಸಂಸ್ಕಾರ ಪ್ರಜ್ಞೆಯನ್ನು ಮೂಡಿಸಲಿ
ಶರ್ಪುದ್ದೀನ್ ಶೇಖ್ ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ