ಸಚಿವೆ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ
December 20, 2024
ಬೆಂಗಳೂರು:ಬೆಳಗಾವಿ ಪೋಲೀಸರ ವಶದಲ್ಲಿದ್ದ ಮಾಜಿ ಸಚಿವ ಎಂಎಲ್ಸಿ ಸಿ.ಟಿ.ರವಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಇನ್ನೊಂದು ಕಡೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಹ ಜಾಮೀನು ಕೋರಿ ಅರ್ಜಿಯನ್ನು ಸಿ.ಟಿ. ರವಿ ಪರ ವಕೀಲರು ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.