ಡಿ.21ರಂದು ಮಿಸ್ಟರ್ ಕರ್ನಾಟಕ-2024″ ಹಾಗೂ “ಮಿಸ್ಟರ್ ಉಡುಪಿ-2024″ ದೇಹದಾರ್ಡ್ಯ ಸ್ಪರ್ಧೆ
ಉಡುಪಿ: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ “ಮಿಸ್ಟರ್ ಕರ್ನಾಟಕ -2024″ ಹಾಗೂ “ಮಿಸ್ಟರ್ ಉಡುಪಿ- 2024” ದೇಹದಾರ್ಡ್ಯ ಸ್ಪರ್ಧೆಯನ್ನು ಇದೇ ಡಿ. 21ರಂದು ಅಂಬಲಪಾಡಿಯ ಶಾಮಿಲಿ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೇಸನ್ ಡಯಾಸ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ದೇಹದಾರ್ಡ್ಯ ಸ್ಪರ್ಧೆಯು ಮಿ. ಕರ್ನಾಟಕ, ಬೆಸ್ಟ್ ಪೊಸರ್, ದಿವ್ಯಾಂಗ, ಮಾಸ್ಟರ್, ಮೈಕಟ್ಟು ಹಾಗೂ ಮಿ. ಉಡುಪಿ ವಿಭಾಗದಲ್ಲಿ ನಡೆಯಲಿದೆ. ಮಿ. ಕರ್ನಾಟಕ ಸ್ಪರ್ಧೆಯು 55, 60, 65, 70, 75, 80, 85 ಹಾಗೂ 85 ಕೆ.ಜಿ. ಕ್ಕಿಂತ ಮೇಲ್ಪಟ್ಟ ತೂಕದ ವಿಭಾಗದಲ್ಲಿ ನಡೆಯಲಿದ್ದು, ಮಿ. ಕರ್ನಾಟಕ ಟೈಟಲ್ ಪ್ರಶಸ್ತಿ ವಿಜೇತರಿಗೆ 55,555 ನಗದು ಮತ್ತು ಟ್ರೋಫಿ, ರನ್ನರ್ ಅಪ್ ಪ್ರಶಸ್ತಿ ವಿಜೇತರಿಗೆ 22,222 ನಗದು ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 10 ಸಾವಿರ, 8 ಸಾವಿರ, 6 ಸಾವಿರ, 4 ಸಾವಿರ ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ಬೆಸ್ಟ್ ಪೊಸರ್ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗೆ 5,555 ರೂ. ನಗದು ಬಹುಮಾನ ಹಾಗೂ ದಿವ್ಯಾಂಗ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 10 ಸಾವಿರ, 8 ಸಾವಿರ, 6 ಸಾವಿರ, 4 ಸಾವಿರ ಹಾಗೂ 2 ಸಾವಿರ ನಗದು ಹಾಗೂ ಭಾಗವಹಿಸುವ ಎಲ್ಲ ದಿವ್ಯಾಂಗ ಸ್ಪರ್ಧಿಗಳಿಗೆ 1,500 ಸಾವಿರ ನಗದು ಬಹುಮಾನ ನೀಡಲಾಗುವುದು. ಮಾಸ್ಟರ್ ವಿಭಾಗದಲ್ಲಿ 40, 50 ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 10 ಸಾವಿರ ನಗದು ಹಾಗೂ ಟಾಪ್ 5 ಸ್ಪರ್ಧಿಗಳಿಗೆ ಕ್ರಮವಾಗಿ 5 ಸಾವಿರ, 4 ಸಾವಿರ, 3 ಸಾವಿರ, 2 ಸಾವಿರ ಹಾಗೂ 1 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪುರುಷರ ಮೈಕಟ್ಟು ವಿಭಾಗದಲ್ಲಿ ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 22,222 ಸಾವಿರ ನಗದು, ಉಳಿದಂತೆ ದ್ವಿತೀಯ, ತೃತೀಯ, ಚತುರ್ಥ, ಪಂಚಮ ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ಕ್ರಮವಾಗಿ 11,111 ಸಾವಿರ ನಗದು, 7,777 ಸಾವಿರ ನಗದು, 5,555 ಸಾವಿರ ನಗದು ಹಾಗೂ 3,333 ಸಾವಿರ ನಗದು ಬಹುಮಾನ ನೀಡಲಾಗುವುದು. ಮಿ. ಉಡುಪಿ ಸ್ಪರ್ಧೆಯು 55, 60, 65, 70, 75, 80, 85 ಹಾಗೂ 85 ಕೆ.ಜಿ. ಕ್ಕಿಂತ ಮೇಲ್ಪಟ್ಟ ತೂಕದ ವಿಭಾಗದಲ್ಲಿ ನಡೆಯಲಿದ್ದು, ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 15 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ಪ್ರಶಸ್ತಿ ವಿಜೇತರಿಗೆ 7,777 ನಗದು ಹಾಗೂ ಬೆಸ್ಟ್ ಪೊಸರ್ ಗೆ 5,555 ನಗದು ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 5 ಸಾವಿರ, 4 ಸಾವಿರ, 3 ಸಾವಿರ, 2 ಸಾವಿರ ಹಾಗೂ 1 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಅಂದು ಮಧ್ಯಾಹ್ನ 1.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಜಿ. ಶಂಕರ್ ಹಾಗೂ ಪುರುಷೋತ್ತಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 2 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ಕೋಶಾಧಿಕಾರಿ ಮಾರುತಿ ಜಿ. ಬಂಗೇರ, ರಾಷ್ಟ್ರೀಯ ತೀರ್ಪುಗಾರರಾದ ಜಾನ್ಸನ್ ಅರುಣ್ ಡಿಸೋಜ, ರಾಘವೇಂದ್ರ ಇದ್ದರು.