ಅಂಬಲಪಾಡಿ: ಫ್ಲೈ ಓವರ್ ಪರಿಸರ ಸ್ನೇಹಿ ಮತ್ತು ಸುರಕ್ಷತೆಗೆ ಪೂರಕವಾಗಿದೆ- ಭಾಸ್ಕರ ಶೆಟ್ಟಿ
ಉಡುಪಿ: ಅಂಬಲಪಾಡಿ ಜಂಕ್ಷನ್ ನಲ್ಲಿ ನಿರ್ಮಾಣವಾಗಲಿರುವ “ಚತುಷ್ಪಥ ಮೇಲ್ಸೇತುವೆ ” ಫ್ಲೈಓವರ್ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದು ಈಗ ಕಾರ್ಯಗತ ವಾಗುವ ಈ ಹಂತದಲ್ಲಿ ಸ್ವಹಿತಾಸಕ್ತಿ ಉದ್ಧೇಶ ಇಟ್ಟುಕೊಂಡು ಜನರ ಇಚ್ಛೆಗೆ ವಿರುದ್ಧವಾಗಿ ವಿಘ್ನಕಾರಿ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ಪ್ರಕಟಪಡಿಸುವುದು ಜನ ಸೇವಕರಿಗೆ ಸಮಂಜಸವಾದುದಲ್ಲ ಎಂದು ವೇದಿಕೆಯ ಸಂಚಾಲಕರು ರಮೇಶ್ ಕಾಂಚನ್ ವರು ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ಫ್ಲೈ ಓವರ್ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯ ಮಾಡಿರುವುದಕ್ಕೆ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಂಚನ್ ರವರಿಗೆ ನಿಜವಾದ ಜನಪರಕಾಳಜಿ ಇದ್ದಿದ್ದರೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಮಂಜೂರಾಗಿ ಒಂದು ವರ್ಷವಾಗಿದ್ದು, ಈ ಹಂತದಲ್ಲಿ ತನ್ನ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿತ್ತು, ಅದನ್ನು ಈಗ ಅನಪೇಕ್ಷಿತ ಪ್ರಸ್ತಾವನೆಯ ಹೇಳಿಕೆ ನೀಡಿರುವುದು ಯಾರನ್ನು ಮೆಚ್ಚಿಸಲು ನೀಡಿರುವ ವಿಪರ್ಯಾಸ ಹೇಳಿಕೆಯಾಗಿದೆ.
ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವನೆಯನ್ನು ಈ ಹಂತದಲ್ಲಿ ಜನಪ್ರತಿನಿಧಿಗಳು ಜವಾಬ್ದಾರಿ ಸ್ಥಾನದಲ್ಲಿರುವವರು ಹೇಳಿಕೆ ನೀಡಿರುವುದು ಕಾರ್ಯಸಾಧ್ಯವಲ್ಲ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ತಜ್ಞರ ಅಭಿಪ್ರಾಯ ತಿಳಿಸಿರುವಂತೆ ಹೊಸ ಪ್ರಸ್ತಾವನೆಯನ್ನು ಈಗಾಗಲೇ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಣಗೊಂಡು ಕರಾವಳಿ ಜಂಕ್ಷನ್ ಮತ್ತು ಕಿನ್ನಿಮುಲ್ಕಿ ಜಂಕ್ಷನ್ ನಲ್ಲಿ ಅಭಿವೃದ್ಧಿಯ ಕಾಮಗಾರಿಗಳು ನಡೆದಿರುವ ಕಾರಣ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಯೋಗ್ಯವಲ್ಲ ಸಾರ್ವಜನಿಕ ಸಂಪತ್ತು ನಷ್ಟ ಉಂಟಾಗುತ್ತದೆ, ಇದು ಬಾಲಿಶವಾದ ಪ್ರಸ್ತಾವನೆಯಯಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಮಯದಲ್ಲಿ ಅಧಿಕಾರದಲ್ಲಿದ ಪಕ್ಷದಲ್ಲಿದ್ದವರಿಗೆ ಕೈಲಾಗದೆ ಈಗ ವಾಸ್ತವವಾಗಿ ಅಪ್ರಸ್ತುತವಾದುದನ್ನು ಈಗ ಪುನರ್ ಪರಿಶೀಲನೆ ಮಾಡಲು ಒತ್ತಾಯ ಮಾಡುವವರು ಸಮಯ ಸಾಧಕರು!. ಇದರಿಂದ ಹೆದ್ದಾರಿ ಅಭಿವ್ರದ್ದಿ ಸಹಿಸದವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಅವರು ಹಾಗೆ ಒತ್ತಾಯಿಸುವ ಬದಲು ಅವರು ತಮ್ಮ ಹೇಳಿಕೆಯನ್ನೇ ಪುನಃ ವಿಮರ್ಶೆ ಮಾಡಿ ಹೆದ್ದಾರಿ ಬಳಕೆದಾರರು ಮತ್ತು ನಾಗರಿಕರ ಬಹುಕಾಲದ ಸುರಕ್ಷತೆಯ ಸ್ವೌಲಭ್ಯಕ್ಕಾಗಿ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಲಿ ಎಂದು ಶೆಟ್ಟಿ ವರು ಕಾಂಚನ್ ವರನ್ನು ವಿನಂತಿಸಿದ್ದಾರೆ.
ಸಂಚಾಲಕರು ಈ ಬಗ್ಗೆ ಮುಂದುವರಿದು ಈಗಾಗಲೇ ಕರಾವಳಿ ಜಂಕ್ಷನ್‌ನಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆ ಅಗಲ ಕಿರಿದಾಗಿದ್ದು ಅಡಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದ್ದು ಈಗಿರುವ ಸರ್ವಿಸ್ ರೋಡ್ ಜಂಕ್ಷನ್‌ನಲ್ಲಿರುವುದರಿಂದ ಸರ್ವಿಸ್ ರೋಡ್‌ನ ಅಗಲ ಕಿರಿದಾಗಿ ಸುಗಮ ಸಂಚಾರಕ್ಕೆ ನಿರಂತರ ತೊಂದರೆ ಆಗುತ್ತಿದೆ. ಮಳೆಗಾಲದಲ್ಲಿ ಕರಾವಳಿ ಜಂಕ್ಷನ್ ಎರಡೂ ಬದಿಯಲ್ಲಿ ನೀರು ಹರಿದುಹೋಗಲು ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲದಿವುದನ್ನು ಕೂಡಾ ವೇದಿಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಸಮಸ್ಯೆ ಯನ್ನು ಮಲ್ಪೆ – ಹೆಬ್ರಿ ಹೆದ್ದಾರಿ ನಿರ್ಮಾಣವಾಗುವಾಗ ಪರಿಹರಿಸುತ್ತೇವೆ ಇದಕ್ಕೆ ಅಂಬಲಪಾಡಿ ಜಂಕ್ಷನ್ ಉಳಿಕೆ ಅನುದಾನವನ್ನು ಉಪಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅಂಬಲಪಾಡಿ ಜಂಕ್ಷನ್ ಅಭಿವೃದ್ಧಿಗೆ ಹೆಚ್ಚಿನ ಸುರಕ್ಷತೆ ಹಾಗೂ ನೀರು ಸಮರ್ಪಕವಾಗಿ ಹರಿದು ಹೋಗಲು ಉಳಿಕೆ ಅನುದಾನ ನನ್ನು ಉಪಯೋಗಿಸಿ ಪರಿಸರ ಸ್ನೇಹಿ ಮತ್ತು ಸುಗಮ ಸಂಚಾರ ಹಾಗೂ ಸುರಕ್ಷತೆ ಯ ಸೌಲಭ್ಯ ಒದಗಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಉಪ ವಿಭಾಗದ ಯೋಜನಾಧಿಕಾರಿಯಲ್ಲಿ ಹೆದ್ದಾರಿ ಸಮಸ್ಯೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಾಗ ತಿಳಿಸಿರುತ್ತಾರೆ. ಹೀಗಾಗಿ ಕಾಂಚನ್ ರವರು ಸರಿಯಾದ ಮಾಹಿತಿಯನ್ನು ಪಡೆಯದೆ ಹೆದ್ದಾರಿ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಮಾಲೋಚನೆ ಸಭೆಯಲ್ಲಿ ತಿಳಿಸದೇ ನೇರವಾಗಿ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿ ಹೆದ್ದಾರಿ ಬಳಕೆದಾರರಲ್ಲಿ ಗೊಂದಲ ಮೂಡಿಸುವುದು ಸಂಶಯಾಸ್ಪದವಾಗಿದೆ.ಬಳಕೆದಾರರ ಬವಣೆಯೊಂದಿಗೆ ಚೆಲ್ಲಾಟ ಆಡುವುದು, ಜನರ ಗಮನವನ್ನು ಬೇರೆಡೆ ಸೆಳೆಯಲು ಮಾಡುವ ವಿಫಲ ಪ್ರಯತ್ನವಾಗಿದೆ. ಈ ರೀತಿಯ ಹೇಳಿಕೆಯಿಂದ ಪ್ರಜ್ಞಾವಂತ ನಾಗರಿಕರು ವಿಚಲಿತರಾಗುವುದಿಲ್ಲ, ಜನರೇ ಇದಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಬಾಸ್ಕರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.