ಶಿರ್ವ ಮಹಿಳಾ ಮಂಡಲ: ದೀಪಾವಳಿ ಸಂಭ್ರಮಾಚರಣೆ

ಶಿರ್ವ: ಮಹಿಳಾ ಮಂಡಲದ ವತಿಯಿಂದ ನಿನ್ನೆ ದೀಪಾವಳಿ ಹಬ್ಬದ ಪ್ರಯುಕ್ತ “ದೀಪ ಪ್ರಜ್ವಲನಾ ಕಾರ್ಯಕ್ರಮವು ಜರುಗಿತು. ಶಿರ್ವದ ಹೃದಯ ಭಾಗದಲ್ಲಿರುವ ಮಹಿಳಾ ಸೌಧದ ಆವರಣದಲ್ಲಿ ಮಹಿಳಾ ಮಂಡಲದ ಸದಸ್ಯರು ಬಲಿಪಾಡ್ಯಮಿಯ ದಿನ ರಾತ್ರಿ ನೂರಾರು ಮಣ್ಣಿನ ಹಣತೆಗಳನ್ನು ಪ್ರಜ್ವಲಿಸುವ ಮೂಲಕ ದೀಪಾವಳಿಯ ಸಂಭ್ರಮವನ್ನು ಆಚರಿಸಿದರು.

ಹಿರಿಯ ಸದಸ್ಯೆ ಮೀರಾ ಸುಂದರ್ ಪ್ರಭು  ಹಾಗೂ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ್ ಅವರು ಶ್ರೀ ಲಕ್ಷ್ಮೀ ದೇವಿಯ ಚಿತ್ರಪಟಕ್ಕೆ ಹಣತೆಯನ್ನು ಬೆಳಗುವುದರ ಮೂಲಕ ಆಚರಣೆಗೆ ಚಾಲನೆ ನೀಡಿದರು. ಮಹಿಳಾ ಮಂಡಲದ ನೂತನ ಅಧ್ಯಕ್ಷರಾದ ಗೀತಾ ವಾಗ್ಳೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.

ಕೋಶಾಧಿಕಾರಿ ಮರಿಯಾ ಜೆಸಿಂತಾರವರು ದೀಪಾವಳಿಯ ಕುರಿತು ಮಾತನಾಡುತ್ತಾ ದೀಪಾವಳಿ ಕೇವಲ ಹಿಂದೂಗಳ ಹಬ್ಬವಲ್ಲ.ದೀಪಾವಳಿಯನ್ನು ಸರ್ವಧರ್ಮೀಯರೂ ಉತ್ಸಾಹದಿಂದ ಆಚರಿಸುತ್ತಾರೆ ಎಂದು ಹೇಳುವುದರೊಂದಿಗೇ ದೀಪಾವಳಿ ಆಚರಣೆಯ ಹಿನ್ನೆಲೆ ಯನ್ನು  ವಿವರಿಸಿದರು.

ಶಿರ್ವದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರೂ ಹಿರಿಯರೂ ಆಗಿರುವ ಸುಂದರ ಪ್ರಭು, ಅಧ್ಯಕ್ಷರಾದ ಶ್ರೀಪತಿ ಕಾಮತ್ ಅವರು ಸಂದರ್ಭೋಚಿತ ವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ  ಹಿರಿಯ ಸಮಾಜ ಸೇವಕ ಅನಂತರಾಯ ಶೆಣೈ, ಜಯಪ್ರಕಾಶ್ ಸುವರ್ಣ, ಸುಮತಿ ಜಯಪ್ರಕಾಶ್ ಸುವರ್ಣ,ಮಹಿಳಾ ಮಂಡಲದ ಉಪಾಧ್ಯಕ್ಷೆ ಸುನೀತಾ ಸದಾನಂದ್ , ಖಜಾಂಚಿ ಮರಿಯಾ ಜೆಸಿಂತಾ,ಜೊತೆ ಕಾರ್ಯದರ್ಶಿ ಗೀತಾ ಮೂಲ್ಯ,ಸದಸ್ಯರುಗಳಾದ  ‌ಮಾಲತಿ ಮುಡಿತ್ತಾಯ, ನಿರಿತಾ ಬಲ್ಲಾಳ್, ವನಿತಾ ದೇವೇಂದ್ರ ನಾಯಕ್, ಐರಿನ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ರಾವ್ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ನೂತನ ಕಾರ್ಯದರ್ಶಿ ಸ್ಪೂರ್ತಿ ಶೆಟ್ಟಿಯವರು ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *

error: Content is protected !!