ಜಯನ್ ಮಲ್ಪೆಗೆ ‘ಜನದನಿ ಸಿರಿ’ ಪ್ರಶಸ್ತಿ

ಉಡುಪಿ: ದಲಿತ ಸಮುದಾಯದ ಮೂಖ ವೇದನೆಗಳಿಗೆ ಧ್ವನಿಕೊಟ್ಟ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಗೆ ‘ಜನದನಿ ಸಿರಿ’ ಪ್ರಶಸ್ತಿ ಲಭಿಸಿದೆ.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರಶಸ್ತಿಯನ್ನು ಘೋಷಿಸಿದೆ.

ಕಳೆದ ಮೂರು ದಶಕಗಳಿಗಿಂತ ಹೆಚ್ಚುಕಾಲ ಕರಾವಳಿಯ ಹಾಗೂ ಬಯಲು ಸೀಮೆಯ ಉದ್ದಕ್ಕೂ ದಲಿತರನ್ನು ಸಂಘಟಿಸಿ ಜಾಗ್ರತಿ ಮೂಡಿಸಿ ನೂರಾರು ಹೋರಾಟ ಮತ್ತು ಸೆಮಿನಾರ್‌ಗಳನ್ನು ನಡೆಸಿದ್ದರು.ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಉಡುಪಿ ಜಿಲ್ಲಾಧ್ಯಾಕ್ಷರಾಗಿರುವ ಜಯನ್ ಮಲ್ಪೆ ನಾಡಿನ ಅನೇಕ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾಗಿತ್ತು.

“ಮೀನು ಕ್ಷಾಮ, ದಿಕ್ಕೆಟ್ಟ ಕರಾವಳಿ” ಎಂಬ ಸಮೀಕ್ಷಾ ಬರಹಕ್ಕೆ ಅತ್ಯುತ್ತಮ ಸಾಮಾಜಿಕ ಕಳಕಳಿಯ ಲೇಖನವೆಂದು ಭಾರತೀಯ ಸಣ್ಣ ಮತ್ತು ಮಾಧ್ಯಮ ಪತ್ರಿಕೆಗಳ ಒಕ್ಕೂಟ ‘ವಡ್ಡರ್ಸೆ ರಘುರಾಮ ಶೆಟ್ಟಿ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ನಾಡಿನ ನತದೃಷ್ಟ ಜನಾಂಗದಲ್ಲಿ ಆತ್ಮಬಲ ಮೂಡಿಸಿ,ಶೋಷಿತ ವರ್ಗಕ್ಕೆ ಧ್ವನಿಯಾಗಿರುವ ಜಯನ್ ಮಲ್ಪೆಗೆ ನ.19ರಂದು ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಮಾಡಲಿದ್ದಾರೆ.

1 thought on “ಜಯನ್ ಮಲ್ಪೆಗೆ ‘ಜನದನಿ ಸಿರಿ’ ಪ್ರಶಸ್ತಿ

Leave a Reply

Your email address will not be published. Required fields are marked *

error: Content is protected !!