ಕುಂದಾಪುರ- ಮೂಡ್ಲಕಟ್ಟೆ ಎಂಐಟಿಗೆ ನ್ಯಾಕ್ ಮಾನ್ಯತೆ
ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ, ಯುಜಿಸಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಯಿಂದ ಉತ್ತಮ ದರ್ಜೆಯ ಮಾನ್ಯತೆ ಪಡೆದುಕೊಂಡಿರುತ್ತದೆ. ವಿದ್ಯಾಲಯದ ಮಾನ್ಯತೆಯನ್ನು ನಿರ್ಧರಿಸಲು, ಪ್ರೊಫೆಸರ್ ವೀರ್ ಬಹಾದ್ದೂರ್ ಸಿಂಗ್ ನೇತ್ರತ್ವದ ನ್ಯಾಕ್ ತಂಡವು ನವೆಂಬರ್ 26 ಮತ್ತು 27 ರಂದು ಭೇಟಿ ಮಾಡಿತ್ತು. ಕಾಲೇಜಿನ ಮಾನ್ಯತೆಯನ್ನು ನಿರ್ಧರಿಸಲು ಪಠ್ಯಕ್ರಮದ ಅಂಶಗಳು, ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ನಾವಿನ್ಯತೆಗಳು ಮತ್ತು ವಿಸ್ತರಣೆ ಚಟುವಟಿಕೆಗಳು, ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ, ಆಡಳಿತದ ನಾಯಕತ್ವ ಮತ್ತು ನಿರ್ವಹಣೆ ಜೊತೆ ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳು ಇವೆಲ್ಲ ಮಾನದಂಡಗಳ ಆದರದ ಮೇಲೆ ನ್ಯಾಕ್ ತಂಡವು ದಾಖಲೆಗಳನ್ನ ಪರಿಶೀಲಿಷಿ, ವಿಮರ್ಶೆ ಮಾಡಿ, ವರದಿಯನ್ನು ನ್ಯಾಕ್ ಗೆ ಸಲ್ಲಿಸಿತ್ತು. ಹಾಗೂ ಕಾಲೇಜಿನ ಚಟುವಟಿಕೆಗಳನ್ನ ನೋಡಿ ಪ್ರಸಂಶೆ ಸಲ್ಲಿಸಿದ್ದರು. ಎಲ್ಲಾ ವಿಭಾಗಗಳಲ್ಲಿ ಒಂದು ಒಳ್ಳೆಯ ಅಂಕಗಳು ಬಂದಿರುವುದರಿಂದ, ಕಾಲೇಜಿಗೆ ಮಾನ್ಯತೆ ಕೊಟ್ಟಿರುವ ಪ್ರಮಾಣ ಪತ್ರ ಸಿಕ್ಕಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಡಾ ಅಬ್ದುಲ್ ಕರೀಮ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನ್ಯಾಕ್ ಇಂದ ಮಾನ್ಯತೆ ಪಡೆದಿರುವುದು ಕಾಲೇಜಿನ ಮತ್ತೊಂದು ಮೈಲಿಗಲ್ಲಾಗಿರುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಸಂತಸ ವ್ಯಕ್ತ ಪಡಿಸಿ ಕಾಲೇಜಿನ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.