ಕಾರ್ಕಳ: ಯುವ ಕಬ್ಬಡ್ಡಿ ಆಟಗಾರ ಹೃದಯಘಾತದಿಂದ ಕುಸಿದು ಬಿದ್ದು ಮೃತ್ಯು
ಉಡುಪಿ: ಯುವ ಕಬ್ಬಡ್ಡಿ ಆಟಗಾರ ಮುಟ್ಲುಪಾಡಿ ನಡುಮನೆ ಪ್ರೀತಂ ಶೆಟ್ಟಿ(26) ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾಟ ಬಳಿಕ ಹೃದಯಘಾತದಿಂದ ನಿಧನರಾಗಿರುತ್ತಾರೆ.
ಶುಕ್ರವಾರ ನಾಗಮಂಗಲದಲ್ಲಿ ತನ್ನ ಕಬ್ಬಡಿ ಆಟದ ತಂಡದೊಂದಿಗೆ ಆಡಿದ ಕೆಲವೇ ಕ್ಷಣಗಳ ನಂತರ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ತಂಡದ ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟೊತ್ತಿಗೆ ಆಗಲೇ ಪ್ರೀತಮ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಪ್ರೀತಮ್ ಅವರು ಇನ್ನು ಕೆಲವೇ ದಿನಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ ವಿಧಿಯ ಕ್ರೂರ ಲೀಲೆಗೆ ಅವರು ಇಹಲೋಕ ತ್ಯಜಿಸಬೇಕಾಯಿತು. ಮೃತರು ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.