ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮನೋಹರ್ ಶೆಟ್ಟಿ ಅವರಿಗೆ ಅಭಿನಂದನೆ
ಕರ್ನಾಟಕ ಸರಕಾರವು ಕ್ರೆಡೈ ಉಡುಪಿ ಅಧ್ಯಕ್ಷರಾದ ಮನೋಹರ್ ಎಸ್. ಶೆಟ್ಟಿ ಅವರನ್ನು ಕಾಪು ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಡೆದ ಕ್ರೆಡೈ ಉಡುಪಿ ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ರೆಡೈ ಉಡುಪಿ ಪದಾಧಿಕಾರಿಗಳಾದ ಸುಧೀರ್ ಶೆಟ್ಟಿ, ಅಮಿತ್ ಅರವಿಂದ್, ನಾಗರಾಜ್ ಬಲ್ಲಾಳ್, ಅಲೆವೂರು ಹರೀಶ್ ಕಿಣಿ, ಪ್ರವೀಣ್ ಸುವರ್ಣ, ಟೆರೆನ್ ಸೌರಸ್, ಕೃಷ್ಣ ಭಟ್, ಶ್ರೇಯಸ್ ಯು.ಆರ್. ಉಪಸ್ಥಿತರಿದ್ದರು.