ಮಣಿಪಾಲ: ಸಂಘಟಕ ಬಾಲಕೃಷ್ಣ ಸಾಲ್ಯಾನ್ ಎರ್ಮಾಳ್‌ರಿಗೆ ಸನ್ಮಾನ
ಮಣಿಪಾಲ: ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ದುಬೈಯ ವಿವಿಧ ಸಂಘಟನೆಗಳ ಸಹಕಾರದಲ್ಲಿ 400 ಕ್ಕೂ ಅಧಿಕ ರಕ್ತದಾನ ಶಿಬಿರ ಆಯೋಜಿಸಿದ್ದ, ಕರ್ನಾಟಕ ಸಂಘ ದುಬೈ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ರಕ್ತದಾನಿ ಬಾಲಕೃಷ್ಣ ಸಾಲ್ಯಾನ್ ಎರ್ಮಾಳ್ ಅವರನ್ನು ಇಂದು ಕೇಂದ್ರ ಕೆಎಂಸಿ ಮಣಿಪಾಲದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೆಎಂಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಾ.ಶಿರನ್ ಶೆಟ್ಟಿ ಉಪ ವೈದ್ಯಕೀಯ ಅಧೀಕ್ಷಕರು, ಡಾ. ಶಮಿ ಶಾಸ್ತ್ರಿ ಮುಖ್ಯಸ್ಥರು, ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಡಾ ಅಭಿನಿತ ಕೆಎಂಸಿ ಮಣಿಪಾಲ, ಜಯ ಸಿ ಕೋಟ್ಯಾನ್ ಅಧ್ಯಕ್ಷರು ಮೊಗವೀರ ಮಹಾಜನ ಸಂಘ. ಡಾ.ಬಳ್ಕೂರು ಗೋಪಾಲಆಚಾರ್ಯ ಪ್ರವರ್ತಕರು ಮಾತೃಶ್ರೀ ಸೇವಾ ಸಂಘ ಮಣಿಪಾಲ, ರಾಘವೇಂದ್ರ ಸುವರ್ಣ ಮಲ್ಪೆ ಆಡಳಿತ ನಿರ್ದೇಶಕರು ಕೃಷ್ಣ ಕುಟೀರ ಮಣಿಪಾಲ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ 56ನೇ ಬಾರಿ ಬಾಲಕೃಷ್ಣ ಸಾಲ್ಯಾನ್ ಎರ್ಮಾಳ್ ರಕ್ತದಾನ ಮಾಡಿದರು.