ಉಡುಪಿ: ಹಿಂದೂ ಜಾಗರಣ ವೇದಿಕೆಯ ಮುಖಂಡರಿಗೆ ಜಾಮೀನು
ಉಡುಪಿ: ಧರ್ಮದಂಗಲ್‌ನ ಕಾರಣಕ್ಕೆ ಉಡುಪಿಯಲ್ಲಿ ಸದ್ದು ಮಾಡಿದ್ದ ಪ್ರಕರಣ ಸಂಬಂಧ ಹಿಂದೂ ಮುಖಂಡರಿಗೆ ಜಾಮೀನು ಮಂಜೂರಾಗಿದೆ. ಕಾರ್ಕಳದ ಶ್ರೀವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮೊದಲು ಪ್ರಾಶಸ್ಯ ನೀಡಬೇಕು ಎಂದು ಹೇಳಿದ ಕಾರಣಕ್ಕೆ ಪೊಲೀಸರಿಂದ ಸೋಮೋಟೋ ಕೇಸ್ ದಾಖಲಾಗಿತ್ತು.
ಹಿಂದೂ ಜಾಗರಣ ವೇದಿಕೆಯ ರಮೇಶ್ ತೆಳ್ಳಾರು ಹಾಗೂ ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮೇಲೆ ಕೇಸು ದಾಖಲಾಗಿತ್ತು.
ಸೋಮೋಟೋ ಕೇಸ್ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರು ಎಂಬ ಕಾರಣಕ್ಕೆ ಹಿಂದೂ ಜಾಗರಣ ವೇದಿಕೆಯ ಪ್ರಾಂತಸ್ತರದ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಇದೀಗ 26 ದಿನಗಳ ಅನಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ರಮೇಶ್ ಪರವಾಗಿ ಮಣಿರಾಜ್ ಶೆಟ್ಟಿ ಮತ್ತು ಶ್ರೀಕಾಂತ್ ಶೆಟ್ಟಿ ಪರವಾಗಿ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.
ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಿ ಸುಮೊಟೊ ಕೇಸು ದಾಖಲಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಬಿಜೆಪಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.