ಕಾಂಚನ ಹುಂಡೈ ಎಕ್ಸಚೇಂಜ್ ಮತ್ತು ಲೋನ್ ಮೇಳಕ್ಕೆ ಚಾಲನೆ
ಉಡುಪಿ: ಕರ್ನಾಟಕದ ಅತೀ ದೊಡ್ಡ ವಾಹನ ಮಾರಾಟ ಸಂಸ್ಥೆ ಕಾಂಚನ ಹೂಂಡ್ಯಾ ಸಂಸ್ಥೆಯು ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಗುರುವಾರ ಆರಂಭಗೊಂಡಿದೆ.
ಈ ಮೇಳವು ಡಿಸೆಂಬರ್ 14 ರವರೆಗೆ ಬ್ರಹ್ಮಾವರದ ಆಶಯ ಹೋಟೆಲ್ ಬಳಿ, ಕುಂದಾಪುರ ಕುಂದೇಶ್ವರ ದೇವಸ್ಥಾನದ ಎದುರುಗಡೆ ರಾಧಾ ಮೆಡಿಕಲ್ ಹತ್ತಿರ ಮತ್ತು ಕಾರ್ಕಳದ ಜೋಡುರಸ್ತೆ ಫಾರ್ಚುನ್ ಲೋಟಸ್ ಕಾಂಪ್ಲೆಕ್ ಎದುರುಗಡೆ ಆಯೋಜಿಸಲಾಗಿದೆ.
ಮೇಳವನ್ನು ಕೆನರಾ ಬ್ಯಾಂಕ್‌ನ ಡಿವಿಜನಲ್ ಮ್ಯಾನೇಜರ್ ಕೌಶಿಕ್ ಅವರು ಉದ್ಘಾಟಿಸಿದರು, ಸೀನಿಯರ್ ಮ್ಯಾನೇಜರ್ ಸೂರಜ್ ಮತ್ತು ಮಾರ್ಕೆಟಿಂಗ್ ಆಫೀಸರ್ ಅಂಕುಶ್, ಉದ್ಯಮಿ ಗಾರ್ಫೀಲ್ಡ್ ಅರ್ಬನ್ ಲೇವಿಸ್, ಕಾಂಚನಾ ಹೂಂಡ್ಯಾ ಆಡಳಿತ ಸಿಬಂದಿಗಳು ಉಪಸ್ಥಿತರಿದ್ದರು.
ಉಡುಪಿ, ಕುಂದಾಪುರ ಮತ್ತು ಕಾರ್ಕಳ ಆಸುಪಾಸಿನ ಹೂಂಡ್ಯಾ ಮತ್ತು ಇತರ ಕಾರು ಗ್ರಾಹಕರು ಈ ಬೃಹತ್ ಮೇಳದ ಕೊಡುಗೆಗಳನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.
ಕೊಡುಗೆಗಳು: ವೆನ್ಯೂ 60,000, ಎಕ್ಸ್‌ಟರ್ 40 ಸಾವಿರ ರೂ, i20 65 ಸಾವಿರ ರೂ., ಗ್ರಾಂಡ್ i10 ನಿಯೋಸ್ 68,000, ಔರಾ 53,000, ವೆನ್ಯೂ ಎನ್ ಲೈನ್ 55,000, ವರ್ನಾ – ರೂ. 80,000 ದ ವರೆಗೆ ರಿಯಾಯಿತಿ ಘೋಷಿಸಲಾಗಿದೆ.
ಸಂಸ್ಥೆಯ ಬಗ್ಗೆ: ಕಾಂಚನಾ ಹೂಂಡ್ಯಾ 2006ರಲ್ಲಿ ಹೊಂಡ್ಯಾ ಮೋಟಾರ್ ಇಂಡಿಯಾದ ಕಾರುಗಳ ಅಧಿಕೃತ ಡೀಲರ್ ಆಗಿ ಕರಾವಳಿ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯು ಪ್ರತಿ ವರ್ಷ 3000ಕ್ಕೂ ಮಿಗಿಲಾಗಿ ಹೂಂಡ್ಯಾ ಕಾರುಗಳನ್ನು ಮಾರಾಟವಾಗಿದೆ. ಉಡುಪಿಯಲ್ಲಿ ಮುಖ್ಯ ಕಚೇರಿ, ಮಂಗಳೂರಿನಲ್ಲಿ ಕಾರ್ಪೋರೇಟ್ ಕಚೇರಿ ಮತ್ತು ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ, ಕುಮಟಾ ಹಾಗೂ ಸುರತ್ಕಲ್‌ನಲ್ಲಿ ಸುಸಜ್ಜಿತ ಮಳಿಗೆ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಹೊಂದಿದೆ.