ಉಡುಪಿ: ಕೊರೋನಾ ಸೋಂಕು ಗಣನೀಯಾ ಇಳಿಕೆ, ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನತೆ
ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸಕ್ರೀಯ ಪ್ರಕರಣ ಗಣನೀಯಾಗಿ ಇಳಿದಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಡುಂತಾಗಿದೆ.
ನ.16 ರ ಆರೋಗ್ಯ ಇಲಾಖೆ ವರದಿಯಲ್ಲಿ ಕೇವಲ 10 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 226 ಮಂದಿಯಲ್ಲಿ ಮಾತ್ರ ಕೊರೋನಾ ಸಕ್ರೀಯಾ ಪ್ರಕರಣಗಳಿದೆ ಎಂದು ತಿಳಿಸಿದೆ.
ಇವರೆಗೆ ಜಿಲ್ಲೆಯಲ್ಲಿ 2,13,990 ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 22,360 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. 187 ಮಂದಿ ಮೃತರಾಗಿದ್ದರು.