ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಶತಚಂಡಿಕಾ ಯಾಗ- ಹೊರೆಕಾಣಿಕೆ  ಶೋಭಾಯಾತ್ರೆಗೆ ಚಾಲನೆ 

ಉಡುಪಿ  ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ .9 ರಿಂದ ಡಿ 15ರವರೆಗೆ  ನಡೆಯುವ ಶತಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆಯ ಪ್ರಯುಕ್ತ ಡಿ.9 ರಂದು ಉಡುಪಿ  ಜೋಡುಕಟ್ಟೆಯಿಂದ ಹೊರೆಕಾಣಿಕೆ ಶೋಭಾಯಾತ್ರೆಗೆ ದೇವಳದ ತಂತ್ರಿಗಳಾದ ಕೆ.ಎಸ್.ಕೃಷ್ಣಮೂರ್ತಿ, ರಮಣ ತಂತ್ರಿಗಳು ಪ್ರಾರ್ಥನೆ ಮಾಡಿ ಆರತಿ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.  

ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆವಾದನ, ತಟ್ಟಿರಾಯ, ಕೀಲು ಕುದುರೆ, ಹುಲಿವೇಷ ಕುಣಿತಾ ಭಜನಾ ತಂಡಗಳು, ಶ್ರೀದೇವಿ, ಆಂಜನೇಯ,ಮಹಿಷಾಸುರ, ಶ್ರೀ ಮಹಿಷಮರ್ದಿನಿ, ಯಕ್ಷಗಾನ ವೇಷಗಳು, ಮಹಿಳೆಯ ರಿಂದ ಪೂರ್ಣಕುಂಭ ಸ್ವಾಗತ, ವಿವಿಧ 50 ಕ್ಕೂ ಹೆಚ್ಚಿನ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಮಿಷನ್ ಆಸ್ಪತ್ರೆ ರಸ್ತೆಯ ಮೂಲಕ ದೇವಳಕ್ಕೆ ಸಾಗಿ ಬಂದು ತಲುಪಿತು. ಮೆರವಣಿಗೆಯಲ್ಲಿ ಶತಚಂಡಿಕಾ ಯಾಗ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ, ಹೊರೆಕಾಣಿಕೆ ಉಸ್ತುವಾರಿ ನವೀನ್ ಭಂಡಾರಿ, ಕಾರ್ಯದರ್ಶಿ ನಾರಾಯಣದಾಸ್ ಉಡುಪ, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್, ಪವಿತ್ರಪಾಣಿ ಶ್ರೀನಿವಾಸ್ ಆಚಾರ್ಯ, ಅರ್ಚಕ ವರದರಾಜ್ ಭಟ್, ಆರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳ್ಳತ್ತೂರು, ಮುಕ್ತೇಸರಾದ ರಾಜಶೇಖರ್ ಭಟ್, ಮೋಹನ್ ಆಚಾರ್ಯ, ದುರ್ಗಾಪ್ರಸಾದ್, ಭಾರತಿ ಜಯರಾಮ ಆಚಾರ್, ಪ್ರೇಮನಾಥ್, ಸುರೇಶ ಶೆಟ್ಟಿ, ಸುಭಾಸ್ ಭಂಡಾರಿ, ಅರುಣ್ ಶೆಟ್ಟಿಗಾರ್, ನಗರ ಸಭೆ ಸದಸ್ಯ ಕೃಷ್ಣರಾವ್ ಕೊಡಂಚ, ಕಿರಣ್ ಕುಮಾರ್ ಬೈಲೂರು,  ರತ್ನಾಕರ ಎನ್ ಶೆಟ್ಟಿ, ಸುಬ್ರಹಮಣ್ಯ ತಂತ್ರಿ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು ನಾಡೋಜ ಡಾ ಜಿ ಶಂಕರ್ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನಗೈದರು. ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು. ವೈದಿಕರಿಂದ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಉದ್ಘಾಟನೆಗೊಂಡಿತ್ತು. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ  ಇವರಿಂದ ಉಪನ್ಯಾಸ ನಡೆಯಿತು.    

Leave a Reply

Your email address will not be published. Required fields are marked *

error: Content is protected !!