ಬ್ರಹ್ಮಾವರ: ಕೋಳಿ ಅಂಕಕ್ಕೆ ದಾಳಿ- ಆರು ಮಂದಿಯ ಬಂಧನ
ಬ್ರಹ್ಮಾವರ, ಡಿ.9: ಹೆಗ್ಗುಂಜೆ ಗ್ರಾಮದ ಗಳಿನ್ ಕೊಡ್ಲು ಹಾಡಿಯಲ್ಲಿ ಡಿ.8ರಂದು ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಸುಧಾಕರ್, ಆನಂದ, ಗಿರೀಶ, ಶರತ, ಜನಾರ್ಧನ, ನಾರಾಯಣ ಬಂಧಿತ ಆರೋಪಿಗಳು. ಇವರಿಂದ 14,980ರೂ. ನಗದು, 5 ಕೋಳಿಗಳು ಹಾಗು ಅವುಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ
ಈ ವೇಳೆ ಮಾಧವ ಮತ್ತು ಇತರರು ಓಡಿ ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ