ಪರ್ಕಳ: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ
December 7, 2024
ಮಣಿಪಾಲ,ಡಿ.7:ಗುರುತು ಹಿಡಿಯಲಾಗದಷ್ಟು ಕೊಳೆತಿರುವ ಅಪರಿಚಿತ ಪುರಷನ ಶವವೊಂದು, ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ಕಲಾಭೂಮಿ ಕಟ್ಟಡದ ಹಿಂಬಾಗದ ಹಾಡಿಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದಿದೆ.
ಮರದಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆವ್ಯಕ್ತವಾಗಿದೆ.ವ್ಯಕ್ತಿ ಮೃತಪಟ್ಟು 20ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಶವ ಕೊಳೆತಿರುವುದರಿಂದ ನೇಣುಕುಣಿಕೆಯಲ್ಲಿ ಭಾರ ತಡೆಯಲಾಗದೆ,ದೇಹದರುಂಡಬೆರ್ಪಟ್ಟಿದೆ.ಘಟನಾ ಸ್ಥಳದಲ್ಲಿ ಹಾಜರಿದ್ದು ಮಣಿಪಾಲದ ಪೋಲಿಸ್ ಠಾಣೆಯ ಎ.ಎಸ್.ಐ ನಾಗೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಸುಧಾಕರ್,ಸಿಬ್ಬಂದಿ ಸಂಗೀತ ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಶವ ಪರೀಕ್ಷಾ ಘಟಕಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ನೆರವಾದರು. ಮೃತ ವ್ಯಕ್ತಿಯ ವಾರಸುದಾರರು ಮಣಿಪಾಲ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.