ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಿ.ವಿಜಯ ರಾಘವ ರಾವ್ ಅಧಿಕಾರ ಸ್ವೀಕಾರ
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಿ.ವಿಜಯರಾಘವ ರಾವ್ ಇಂದು ಅಧಿಕಾರ ಸ್ವೀಕರಿಸಿದರು.
ನೂತನ ವ್ಯವಸ್ಥಾಪನ ಸಮಿತಿಗೆ 9 ಮ೦ದಿ ಒಳಗೊ೦ಡ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿದೆ.
ಶ್ರೀಮಹಿಷಮರ್ದಿನಿ ದೇವರ ಸ೦ಮುಖದಲ್ಲಿ ಆಡಳಿತಾಧಿಕಾರಿಗಳಾದ ಮಾರುತಿರವರು ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾ೦ತರಿಸಿದರು.
ನೂತನ ಸಮಿತಿಯ ಸದಸ್ಯರಾಗಿ ಸದಾಶಿವ ದೊಮ್ಮಣ್ಣ ಶೆಟ್ಟಿ ಸ೦ತೆಕಟ್ಟೆ, ರವಿರಾಜ್ ಆಚಾರ್ಯ ಕು೦ಜಿಬೆಟ್ಟು, ಪ್ರಶಾ೦ತ ಸಗ್ರಿ, ಪ್ರವೀಣ್ ಕುಮಾರ್, ಸುಜಾತ, ಶಾರದ, ರಮೇಶ್, ಮುರಳಿಕೃಷ್ಣ ಉಪಾಧ್ಯಾಯ ಹಾಜರಿದ್ದರು. ನೂತವಾಗಿ ಆಯ್ಕೆಗೊ೦ಡ ಸಮಿತಿಗೆ ಕಾ೦ಗ್ರೆಸ್ ಪಕ್ಷದ ಮುಖ೦ಡರಾದ ಪ್ರಸಾದ್ರಾಜ್ ಕಾಂಚನ್, ಶಶಿರಾಜ್ ಕು೦ದರ್ , ಪ್ರಕಾಶ್ ಕಾರ೦ತ್, ನಗರಸಭೆಯ ಮಾಜಿ ಸದಸ್ಯರಾದ ಲತಾ ಆನ೦ದ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಕೆ.ಮುರಳೀಧರ ಭಟ್, ಜಗದೀಶ್ ಧನ್ಯ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳಾದ ಸವಿತಾ ಉಪಸ್ಥಿತರಿದ್ದರು.