ಲಯನ್ಸ್ ಕ್ಲಬ್ ಉಡುಪಿ – ಬೃಹತ್ ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಆರೋಗ್ಯ ಶಿಬಿರ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇದರ ನೇತ್ರತ್ವದಲ್ಲಿ, ಪ್ರಸಾದ್ ನೇತ್ರಾಲಯ, ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ KMC ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಹಾಗೂ ಕಲ್ಮಾಡಿ ಚರ್ಚ್ ಆರೋಗ್ಯ ಆಯೋಗ ಇದರ ಸಹಭಾಗಿತ್ವದಲ್ಲಿ ಕಲ್ಮಾಡಿ ಸ್ಟೆಲ್ಲಾ ಮೆರೀಸ್ ಚರ್ಚ್ ಹಾಲ್ ನಲ್ಲಿ ಉಚಿತ ನೇತ್ರ ತಪಾಸಣೆ, ಪೊರೆ ಚಿಕಿತ್ಸೆ, ಕನ್ನಡಕ ವಿತರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ 250ಕ್ಕೂ ಮಿಕ್ಕ ಶಿಬಿರಾರ್ಥಿಗಳು ಭಾಗವಹಿಸಿದ್ದು ಪ್ರಯೋಜನ ಪಡೆದರು. ಇದರ ಜೊತೆಗೆ Ecg, ಸ್ಥನ ಕ್ಯಾನ್ಸರ್ ತಪಾಸಣೆ, ಹಾಗೂ ಆಯುಶ್ಮಾನ್ ಕಾರ್ಡ್ ಸೌಲಭ್ಯವನ್ನು ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಉದ್ಧಾಟನೆಯನ್ನು ಡಾ. ಎಚ್ ಆಶೋಕ್, ಜಿಲ್ಲಾ ಸರ್ಜನ್ ಉಡುಪಿ ಜಿಲ್ಲಾಸ್ಪತ್ರೆ ಇವರು ನೆರೆವೇರಿಸಿ ಆರೋಗ್ಯ ಮಾಹಿತಿಯನ್ನು ನೀಡಿದರು.
ವಂದನೀಯ ಧರ್ಮಗುರುಗಳು, ಬ್ಯಾಸ್ಟಿಸ್ಟ್ ಮಿನೇಜಸ್ ಆಶಿರ್ವಚನ ಗೈದರು. ಈ ವೇದಿಕೆಯಲ್ಲಿ, ಮುಖ್ಯ ಅತಿಥಿಗಳಾಗಿ, ಡಾIIಸಂದೀಪ್ ಸಿರಿಸ್, ಡಾIIಅನುಶಾ, ಡಾ.ಜೇಶ್ಮಾ ಉಡುಪಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ್.ಜೆ ಕಲ್ಮಾಡಿ, ಲಯನ್ಸ್ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಹಾಗೂ ಚರ್ಚ್ ಉಪಾಧ್ಯಕ್ಷೆ ಐಡಾ ಡಿಸೋಜ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲೂಯಿಸ್ ಲೋಬೋ ಪ್ರಸ್ತಾವನೆ ಗೈದು ಸ್ವಾಗತಿಸಿದ್ದರು. ಲಯನ್ಸ್ ಸದಸ್ಯ ಲ್ಯಾನ್ಸಿ ಪೆರ್ನಾಂಡಿಸ್ ನಿರೂಪಿಸಿ,ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್ ವಂದಿಸಿದರು. ಲಯನ್ಸ್ ಸಂಗಮ ಕೋಆರ್ಡಿನೆಟರ್ ವರ್ವಾಡಿ ಪ್ರಸಾದ್ ಶೆಟ್ಟಿ, ಖಜಾಂಚಿ ಲೆಸ್ಲಿ ಕರ್ನೆಲೀಯಾ, ಲೀಯೋ ಅಧ್ಯಕ್ಷ ಲೆನನ್ ಕರ್ನೆಲೀಯಾ, ಲಯನ್ ವಿಜಯ ಕುಮಾರ್ ಮುದ್ರಾಡಿ, ಲ.ಹರೀಶ್ ಕಿಣಿ, ಲಯನ್ ಲೇಡಿ ನಿರುಪಮಾ ಪ್ರಸಾದ್ ಶೆಟ್ಟಿ, ಲೋಯ್ಸೆಟ್ ಕರ್ನೆಲೀಯೊ, ಹಾಗೂ ಆಪಾರ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.