ಮಣಿಪಾಲ: ಬಿಯರ್ ಬಾಟಲಿಯಿಂದ ಹೊಡೆದು ಹೊಟೇಲ್ ಕಾರ್ಮಿಕನ ಹತ್ಯೆ

ಮಣಿಪಾಲ,(ಉಡುಪಿ ಟೈಮ್ಸ್ ವರದಿ): ಇಲ್ಲಿನ ಮುಖ್ಯರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆಗೈದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಹತ್ಯೆಯಾದ ಕಾಸರಗೋಡು ನಿವಾಸಿ ಶ್ರೀಧರ ನಾಯಕ ಎಂದು ತಿಳಿದುಬಂದಿದೆ. ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರ ಕುಕ್ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರರಿಂದ ನಾಲ್ಕು ಜನರಿದ್ದ ತಂಡ ಬೆಳಿಗ್ಗೆ ಆರರ ಸುಮಾರಿಗೆ ಹೊಡೆದಾಟ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಯಾವುದೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರೀಧರ್ ಅವರನ್ನು ತಂಡ ಬಿಯರ್ ಬಾಟಲಿಯಲ್ಲಿ ಕತ್ತು ಸೀಳಿ ಹತ್ಯೆಗೈದಿದ್ದಾರೆ.

ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ಹೋದಾಗ ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕುಮಾರ್ , ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ , ಮಂಜುನಾಥ್ ಆಗಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!