ಡಿ.20: ಉಪೇಂದ್ರ ನಿರ್ದೇಶನದ ‘ಯುಐ’ ಬಿಡುಗಡೆ

ಮಂಗಳೂರು: ಬಹುನಿರೀಕ್ಷಿತ ‘ಯುವ’ ಚಲನಚಿತ್ರ ಡಿ.20ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ದತೆ ನಡೆದಿದೆ. ಹೊಸತನ ಹೊಂದಿರುವ ಈ ಚಿತ್ರ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಂತೆ ಮಾಡಲಿದೆ.

‘ಯುಐ’ ಚಿತ್ರ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳ್ಳುತ್ತಿದೆ. ‘ವಾರ್ನರ್’ ಹೆಸರಿನಲ್ಲಿ ಚಿತ್ರದ ಟೀಸ‌ರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ ಚಿತ್ರದ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯವಾಗಿ ಚಿತ್ರದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಮಾಡಲಾಗುತ್ತದೆ. ‘ಯುಐ’ ಚಿತ್ರಕ್ಕೆ ‘ವಾರ್ನರ್’ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಇಡೀ ವಿಶ್ವವನ್ನೇ ಕಾಡಿರುವ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ವಿಶ್ವದ ನಾಯಕ ನಿನಗೆ ಹಾಗೂ ನನಗೆ ಗ್ಲೋಬಲ್ ವಾರ್ನಿಂಗ್, ಗ್ಲೋಬಲ್ ವಾರ್ಮಿಂಗ್, ಕೋವಿಡ್ 19, ಎಐ, ನಿರುದ್ಯೋಗ,ಯುದ್ದಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಶುರುವಾಗುವ ಈ ವಿಡಿಯೋದಲ್ಲಿ 2040ರ ಜಗತ್ತು ಹೇಗಿರಬಹುದು ಎನ್ನುವುದರ ಕಾಲ್ಪಣಿಕ ಚಿತ್ರ ತೋರಿಸಲಾಗಿದೆ ಎಂದವರು ತಿಳಿಸಿದರು. ವಿಎಫ್‌ಎಕ್ಸ್‌ಸೆಟ್, 3ಡಿ ಬಾಡಿ ಡಬಲ್ ಸೇರಿದಂತೆ ಹಲವು ವಿಶೇಷತೆಗಳು ಈ ಚಿತ್ರದಲ್ಲಿದ್ದು, ರೀಶ್ಚಾ ನಾಣಯ್ಯ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶ್ರೀಕಾಂತ್ ಕೆಪಿ, ಲಹರಿ ವೇಲು, ನವೀನ್ ಮನೋಹರ್, ರಾಜೇಶ್ ಭಟ್, ಪ್ರೀತಮ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!