ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ- ಡಿ.04 ರಂದು ಉಡುಪಿಯಲ್ಲಿ ಪ್ರತಿಭಟನೆ
ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ನಡೆಯುತ್ತಿದೆ. ಅಲ್ಲದೇ ಹಿಂದೂ ಮುಖಂಡ ಚಿನ್ಮಯ ಕೃಷ್ಣದಾಸ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಡಿ.4 ರಂದು ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಬಗ್ಗೆ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಸಂಚಾಲಕ ರಾಧಕೃಷ್ಣ ಮೆಂಡನ್ ಮಾತನಾಡಿ, ಪ್ರತಿಭಟನೆ ಸಂಘ ಪರಿವಾರ, ವಿವಿಧ ಸಂಘ ಸಂಸ್ಥೆಗಳು, ಬಿಜೆಪಿ ಬೆಂಬಲವನ್ನು ಸೂಚಿಸಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಪ್ರತಿಭಟನಾ ಜಾಥ ಆರಂಭಗೊಳ್ಳಲಿದೆ. ಜಾಥವು ಕೋರ್ಟ್ ರಸ್ತೆ, ಕೆ.ಎಮ್.ಮಾರ್ಗ, ಸರ್ವೀಸ್ ರಸ್ತೆ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಕೃಷ್ಣ ಮಠದ ಪಾರ್ಕಿಂಗ್ ವಠಾರವನ್ನು ತಲುಪಲಿದೆ ಎಂದರು.
ಸಂಜೆ 4.30 ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂಧ್ರತೀರ್ಥರ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಇಸ್ಕಾನ್ ಉಡುಪಿ ಅಧ್ಯಕ್ಷ ಗೋವಿಂದ್ ದಾಸ್, ಸಮಿತಿಯ ಪ್ರಮುಖರಾದ ರಂಜಿತ್ ಹಾವಂಜೆ, ಅಖಿಲೇಶ್ ಉಪಸ್ಥಿತರಿದ್ದರು.