‘ಲೋಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ -2024’ ಸಂಪನ್ನ
ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ)ಯ 101 ನೇ ವಾರ್ಷಿಕೋತ್ಸವದ ಪ್ರಯುಕ್ತ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಉಡುಪಿ ರನ್ನರ್ಸ್ ಕ್ಲಬ್‌ನ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಉಡುಪಿ ಮ್ಯಾರಥಾನ್-2024 ಭಾನುವಾರ ಅದ್ಧೂರಿಯಾಗಿ ನಡೆಯಿತು.
ರಾಜ್ಯ, ಹೊರರಾಜ್ಯದ ಜತೆಗೆ ಇಥಿಓಪಿಯಾ, ಕೀನ್ಯಾ, ಜರ್ಮನ್, ಉಗಾಂಡದ ಅಂತಾರಾಷ್ಟಿçÃಯ ಓಟಗಾರರು ಭಾಗವಹಿಸಿದ್ದು, ಮುಖ್ಯ ಅಕರ್ಷಣೆ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿತ್ತು. 3500 ಕ್ಕೂ ಅಕ ಮಂದಿ ಭಾಗವಹಿಸಿದ್ದರು. ಬೆಳಗ್ಗಿನ ಜಾವ 5 ಗಂಟೆಗೆ ಆರಂಭವಾದ ಮ್ಯಾರಥಾನ್ 9 ಗಂಟೆಗೆ ಸಮಾಪನಗೊಂಡಿತು. ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ಪುರುಷರು ಮತ್ತು ಮಹಿಳೆಯರಿ ಗಾಗಿ 21 ಕಿ.ಮೀ. ಹಾಫ್ ಮ್ಯಾರಥಾನ್, ಜತೆಗೆ 10 ಕಿ.ಮೀ. 5 ಕಿ.ಮೀ. ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ 5 ಮತ್ತು 3 ಕಿ.ಮೀ. ಮೋಜಿನ ಓಟ ನಡೆಯಿತು.
21 ಕಿ.ಮೀ. ನಲ್ಲಿ 250, 10 ಕಿ.ಮೀ. ನಲ್ಲಿ 750, 5 ಕಿ.ಮೀ. ನಲ್ಲಿ 850 ಮಂದಿ ಹಾಗೂ ವಿದ್ಯಾರ್ಥಿಗಳ 5 ಮತ್ತು 3 ಕಿ.ಮೀ. ನಲ್ಲಿ 1050 ಮತ್ತು ಫನ್ ರನ್‌ನಲ್ಲಿ 525 ಮಂದಿ ಪಾಲ್ಗೊಂಡಿದ್ದರು. ವಿಜೇತ ಕ್ರೀಡಾಪಟು ಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿದರು.
ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸ್ವಾಸ್ಥವನ್ನು ಕಾಪಾಡುವ ಉದ್ದೇಶದಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ಆಧುನಿಕ ಜೀವನ ಶೈಲಿಯಿಂದಾಗಿ ಹೃದಯಾಘಾತದಂತಹ ದುರಂತಗಳ ಸಂಖ್ಯೆ ಹೆಚ್ಚುತ್ತಿದೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಅವಶ್ಯವಿದೆ ಎಂದರು.
ಆದಾನಿ ಗ್ರೂಪ್‌ನ ನಿರ್ದೇಶಕ ಕಿಶೋರ್ ಆಳ್ವ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಆನಂದ ಪಿ. ಸುವರ್ಣ, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ನ ಸಿಇಓ ಹರಿಕುಮಾರ್, ಡಿಜಿಎಂ ಎಂ. ಅಂಬಲವನಮ್, ರನ್ರ‍್ಸ್ ಕ್ಲಬ್ ಅಧ್ಯಕ್ಷ ಡಾ. ತಿಲಕ್ ಚಂದ್ರಪಾಲ್, ಯುವ ಜನ ಕ್ರೀಡಾ ಮತ್ತು ಸಬಲೀಕರಣದ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ, ಉಡುಪಿ ರನ್ರ‍್ಸ್ ಕ್ಲಬ್‌ನ ಪದಾಕಾರಿಗಳಾದ ದಿವಾಕರ ಗಣಪತಿ ನಾಯಕ್, ಸತೀಶ್ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ, ದಿವೇಶ್ ಶೆಟ್ಟಿ, ಯತೀಶ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಾಪ್ ಮ್ಯಾರಥಾನ್: ಶಿವಾನಂದ- ಸಪ್ನಾಗೆ ಪ್ರಶಸ್ತಿ
21ಕಿ.ಮೀ. ದೂರ ಹಾಫ್ ಮ್ಯಾರಥಾನ್‌ನ ಮುಕ್ತ ಪುರುಷರ ವಿಭಾಗದಲ್ಲಿ ಪ್ರಥಮ- ಶಿವಾನಂದ ಲಕ್ಷ್ಮಣ್ ಚಿಗರಿ, ದ್ವಿ- ಸಚಿನ್, ತೃ- ಸುನೀಲ್ ಗಾಂವ್ಕರ್. ಮಹಿಳೆಯರ ವಿಭಾಗದಲ್ಲಿ ಪ್ರಥಮ- ಸಪ್ನಾ ಪಾಟೇಲ್, ದ್ವಿ- ನಂದಿನಿ ಜಿ., ತೃ- ಜಸ್ಮಿತಾ ಕೆ.
36-50ವರ್ಷ ಪುರುಷರ ವಿಭಾಗದಲ್ಲಿ ಪ್ರ- ಆ್ಯಡಿನ್ಯೂ ಮೆಕೊನೆನ್, ದ್ವಿ-ನಂದೇಶ್ ಗಾಂವ್ಕರ್, ತೃ-ನರೇಶ್ ಕುಮಾರ್. ಮಹಿಳೆಯರ ವಿಭಾಗದಲ್ಲಿ ಪ್ರ- ಮೆಹ್‌ವಿಶ್ ಹುಸೈನ್, ದ್ವಿ-ಡಾ.ಅನುಪಮಾ ರಾವ್, ತೃ- ಅನುಷಾ ಜಿ.
51-60ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಪ್ರ-ಸುನೀಲ್ ಮೆನನ್, ದ್ವಿ-ಚಂದ್ರಶೇಖರ್, ತೃ-ವಿಶ್ವನಾಥ್ ಕೋಟ್ಯಾನ್. ಮಹಿಳೆಯರ ವಿಭಾಗದಲ್ಲಿ ಪ್ರ- ಡಾ.ಸಂಧ್ಯಾ ಅಲೆಟ್ಟಿ.
61ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರ-ರಾಮಸ್ವಾಮಿ, ದ್ವಿ-ವಿಶ್ವನಾಥ್ ಬಾಲಚಂದ್ರ, ತೃ- ಅಂಬಿಗಪತಿ ವಿ. ಮಹಿಳೆಯರ ವಿಭಾಗದಲ್ಲಿ ಪ್ರ- ರೆಬಾ ಪಿಲಿಪೋಸ್, ದ್ವಿ- ಅರುಣಾಕಲಾ ರಾವ್, ತೃ- ಸುಲತಾ ಕಾಮತ್.”