ಪೋಲಿಸ್ ಕಮಿಷನರ್‌ ಗೆ ತಾಕತ್ತಿದ್ದರೆ ಪೇಜಾವರಶ್ರೀ ಮೇಲೆ ಕೇಸು ದಾಖಲಿಸಿ- ಸುಂದರ ಮಾಸ್ತರ್

ಉಡುಪಿ: ಮಂಗಳೂರು ಪೋಲಿಸ್ ಕಮೀಷನರ್ ಗೆ ತಾಕತ್ತಿದ್ದರೆ ಸಂವಿಧಾನ ವಿರೋಧಿಸಿ ಹೇಳಿಕೆ ನೀಡಿದ ಉಡುಪಿ ಪೇಜಾವರ ಮಠದ ಸ್ವಾಮೀಜಿರವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಲಿ.ಅದು ಬಿಟ್ಟು ಸಂವಿಧಾನದ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರಾದ ಮುನೀರ್ ಕಾಟಿಪಳ್ಳ ರವರ ಮೇಲಲ್ಲಾ.

ನೀವೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕಾಗಿರುವವರು. ಸಂಘ ಪರಿವಾರದವರ ಆಣತಿಯಂತೆ ಅಲ್ಲಾ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರಮಾಸ್ತರ್ ಸವಾಲು ಹಾಕಿದ್ದಾರೆ.

ಸಂವಿಧಾನದ ಆಶಯದಂತೆ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರಾ ? ಇದು ಪೋಲಿಸ್ ಗೂಂಡಾ ರಾಜ್ಯ ಅಲ್ಲಾ. ಸಮಾಜದ ಅಂಕುಡೊಂಕುಗಳ ಬಗ್ಗೆ, ಜನಪ್ರತಿನಿಧಿಗಳ ವೈಫಲ್ಯದ ಬಗ್ಗೆ, ಪ್ರಜೆಗಳ ಮೂಲಭೂತ ಅವಶ್ಯಕತೆಗಳ ಬಗ್ಗೆ ಚಳವಳಿ ನಡೆಸಿದರೆ ಅದು ನಿಮಗೆ ಕಾನೂನು ಬಾಹಿರವಾಗಿ ಕಾಣುತ್ತದೋ? ಪ್ರತಿಭಟನೆಗೆ ಅವಕಾಶ ನಿರಾಕರಿಸಿ, ಪ್ರಜಾಪ್ರಭುತ್ವ ವಿರೋಧಿ ಪೋಲಿಸ್ ಸೇವೆ ನಡೆಸುವುದು ಜನವಿರೋಧಿ ನೀತಿಯಾಗುತ್ತದೆ.

ಎಲ್ಲಿ ನ್ಯೂನತೆಗಳಿವೆಯೋ ಅಲ್ಲೇ ಪ್ರತಿಭಟನೆ ನಡೆಸಬೇಕೇ ಹೊರತು. ರಸ್ತೆ ದುರಸ್ತಿ ಮಾಡಿ ಎಂದು ಸ್ಟಾರ್ ಹೋಟೆಲ್ ಒಳಗೆ ಕೂತು ಪ್ರತಿಭಟನೆ ಮಾಡುವುದಲ್ಲಾ. ನಮ್ಮದು ಪ್ರಜಾಪ್ರಭುತ್ವ ಭಾರತ ದೇಶ, ಇದು ಹಿಟ್ಲರನ ಜರ್ಮನಿ ಅಲ್ಲಾ.

ಮುಖ್ಯಮಂತ್ರಿಯವರು ಈ ಕೂಡಲೇ ಮಂಗಳೂರಿನ ಕಮೀಷನರ್ ಅಗರವಾಲ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಮುನೀರ್ ಕಾಟಿಪಳ್ಳ ಮೇಲೆ ಹಾಕಿದ ಕೇಸನ್ನು ಈ ಕೂಡಲೇ ವಾಪಾಸು ಪಡೆಯಬೇಕೆಂದು ಆಗ್ರಹಿಸುತ್ತೇನೆ.

Leave a Reply

Your email address will not be published. Required fields are marked *

error: Content is protected !!