ಕಟಪಾಡಿ: ಏಣಗುಡ್ಡೆಯಲ್ಲಿ ಮುಳ್ಳಮುಟ್ಟೆ ಆಚರಣೆ

ಉಡುಪಿ: ಹಿಂದಿನ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ  ಜಾನುವಾರುಗಳನ್ನು ಗುಡ್ಡ-ಲಚ್ಚಿಲ್ ಪ್ರದೇಶಗಳಿಗೆ ಮೇಯಲು ಕೊಂಡೊಯ್ಯುತ್ತಿದ್ದ ಕಾಲ. ಜಾನುವಾರುಗಳನ್ನು ಕಾಯುತ್ತಿದ್ದ ಮಕ್ಕಳು ಮುಳ್ಳು-ಕಸಕಡ್ಡಿಗಳನ್ನು ಒಂದುಕಡೆ ಶೇಖರಿಸಿ ಇಡುವುದು ರೂಢಿಯಲ್ಲಿತ್ತು. ಅಂತಹ ಶೇಖರಿಸಿ ಇಟ್ಟಂತಹ ರಾಷಿಗೆ ದೀಪಾವಳಿಯಂದು ಪ್ರಾಥಕಾಲದಲ್ಲಿ ಊರವರು ಸೇರಿ ಸಾಮೂಹಿಕವಾಗಿ ಬೆಂಕಿಹಚ್ಚಿ ಸುಡುವಂತಹ ಒಂದು ಆಚರಣೆ ಕೆಲವೇ ಕಡೆ ಇಂದಿಗೂ ಚಾಲ್ತಿಯಲ್ಲಿದೆ.

ಸಾಂಪ್ರದಾಯಿಕವಾಗಿ ನಡೆಸಲಾಗುವ ಈ ಆಚರಣೆಗೆ ನೂರಾರು ವಷ೯ಗಳ ಇತಿಹಾಸವಿದೆ. ತುಳುನಾಡಿನ ಇಂತಹ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳು ನಶಿಸಿ ಹೋಗಬಾರದು ಎಂದು ಸಾಹಿತಿ ಕಟಪಾಡಿ ಶಂಕರ ಪೂಜಾರಿ ಹೇಳಿದರು. ಅವರು ಏಣಗುಡ್ಡೆಯ ನೀಚದೇವಸ್ಥಾನದ ವಠಾರದಲ್ಲಿ ಜರಗಿದ ಮುಳ್ಳಮುಟ್ಟೆ ಸುಡುವ ಕಾಯ೯ಕ್ರಮದಲ್ಲಿ ಮಾತನಾಡಿದರು. 

ದೇವಸ್ಥಾನದ ಮುಖ್ಯಸ್ಥ ಆನಂದ ಮಾಬಿಯಾನ್, ಊರಿನ ಗುರಿಕಾರರಾದ ದಾಮೋಧರ.ಕೆ.ಪೂಜಾರಿ, ಸೂರಪ್ಪ ಕುಂದರ್, ವಿನೋಧರ ಪೂಜಾರಿ, ನಾರಾಯಣ ಮದಿಪು, ಹರಿದಾಸ ಶ್ರೀಯಾನ್, ಗಣೇಶ ಮಿತ್ತೋಟ್ಟು, ರಾಜೇಂದ್ರ ಆಚಾಯ೯, ಸಿದ್ಧಾಂತ್.ಎ.ಮಾಬಿಯಾನ್ ಉಪಸ್ಥಿತರಿದ್ದರು. ರಮೇಶ್ ಕೋಟ್ಯಾನ್, ಹಾಗೂ ಕೃಷ್ಣ ಪೂಜಾರಿ ಪೂಜಾ ವಿಧಿಗಳನ್ನು ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!