ಹೂಡೆ ಸಾಲಿಹಾತ್ ಕಾಲೇಜ್: ನ.30 ನೂತನ ಕಟ್ಟಡ ಉದ್ಘಾಟನೆ ಮತ್ತು ಸಾಮುದಾಯಿಕ ಸಮಾವೇಶ

Oplus_131072

ಉಡುಪಿ: ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಭಾಗವಾಗಿರುವ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಮತ್ತು “ಉಜ್ವಲ ಭವಿಷ್ಯದೆಡೆಗೆ” ಎಂಬ ಸಾಮುದಾಯಿಕ ಸಮಾವೇಶ ಇದೇ ನ. 30ರಂದು ಸಂಜೆ 6 ಗಂಟೆಗೆ ಹೂಡೆಯ ಸಾಲಿಹಾತ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಮಹಮ್ಮದೀಯ ಎಜುಕೇಷನಲ್ ಟ್ರಸ್ಟ್ ನ ಉಪಾಧ್ಯಕ್ಷ ಇದ್ರೀಸ್ ಹೂಡೆ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈವಿದ್ಯಮಯ, ಸೌಹಾರ್ದಯುತ, ಶಾಂತಿ ಮತ್ತು ಪ್ರಗತಿಯ ಭಾರತಕ್ಕಾಗಿ ವಿಶ್ವಾಸ, ಪರಸ್ಪರ ನಂಬಿಕೆಯ ಹಾಗೂ ಮೌಲ್ಯಗಳಿಂದ ಸಂಪನ್ನ ವಿಶಾಲ ದೃಷ್ಟಿಕೋನದ ಬೆಳೆಸುವ ಮೂಲಕ ಸಾಮಾಜಿಕ ಪರಿವರ್ತನೆಯತ್ತ ಸಾಗುವ ಉದ್ದೇಶದಿಂದ ಬೃಹತ್ ಸಾಮುದಾಯಿಕ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಅಂದು ಸಂಜೆ 6 ಗಂಟೆಗೆ ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷ ಜನಾಬ್ ಸೈಯದ್ ಸದಾತುಲ್ಲಾ ಹುಸೈನಿ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಡೆಯುವ ಸಮಾವೇಶದ ಅಧ್ಯಕ್ಷತೆಯನ್ನು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜನಾಬ್‌ ಮುಹಮ್ಮದ್ ಇಸ್ಮಾಯಿಲ್ ಸಾಹೇಬ್ ವಹಿಸಲಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್‌’ನ ಅಖಿಲ ಭಾರತ ಉಪಾಧ್ಯಕ್ಷ ಜನಾಬ್‌ ಮಲಿಕ್ ಮೊಹ್’ತಸೀಮ್ ಖಾನ್, ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷ ರಮೀಝ್ ಇ.ಕೆ, ಜಮಾಅತೆ ಇಸ್ಲಾಮಿ ಹಿಂದ್‌’ನ ರಾಜ್ಯ ಅಧ್ಯಕ್ಷ ಡಾ. ಮುಹಮ್ಮದ್ ಸಾದ್, ಎಸ್.ಐ.ಓ ರಾಜ್ಯ ಅಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ, ಶಾಂತಿ ಪ್ರಕಾಶನದ ನಿರ್ದೇಶಕ ಜನಾಬ್ ಮುಹಮ್ಮದ್ ಕುಂಞ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ಅಬ್ದುಲ್ ಅಝೀಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ನಗರದ ಅಧ್ಯಕ್ಷ ನಿಸಾರ್ ಅಹಮದ್, ಜಮಾಅತೆ ಇಸ್ಲಾಮೀ ಹಿಂದ್ ಕಾಪು ಅಧ್ಯಕ್ಷ ಅನ್ವರ್ ಅಲಿ, ಎಸ್ಐಓ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಮೀರ್ ತೀರ್ಥಹಳ್ಳಿ ಇದ್ದರು.

Leave a Reply

Your email address will not be published. Required fields are marked *

error: Content is protected !!