ಉಡುಪಿ: ವ್ಯವಸ್ಥಾಪನಾ ಸಮಿತಿ ರಚನೆ- ಅರ್ಜಿ ಆಹ್ವಾನ

Oplus_131072

ಉಡುಪಿ, ನ.25: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಜಿಲ್ಲೆಯಲ್ಲಿರುವ ಪ್ರವರ್ಗ ಬಿ ಗೆ ಸೇರಿದ 8 ಮತ್ತು ಪ್ರವರ್ಗ ಸಿ ಗೆ ಸೇರಿದ 55 ದೇವಸ್ಥಾನಗಳಿಗೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಠ 25 ವರ್ಷ ವಯಸ್ಸಾಗಿರುವ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆ ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗಧಿತ ನಮೂನೆ -1 (ಬಿ) (22 ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿ ಡಿಸೆಂಬರ್ 9 ರ ಒಳಗಾಗಿ ಸಲ್ಲಿಸಬಹುದಾಗಿದೆ.

ಪ್ರವರ್ಗ ‘ಬಿ’ ದೇವಸ್ಥಾನಗಳು: ಕುಂದಾಪುರ ತಾಲೂಕಿನ ಸೌಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಾರ್ಕಳ ತಾಲೂಕು ಎಳ್ಳಾರೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ ಹಾಗೂ ಪೆರ್ವಾಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೈಂದೂರು ತಾಲೂಕಿನ ಮರವಂತೆಯ ಶ್ರೀ ಮಹಾರಾಜ ಸ್ವಾಮಿ ದೇವಸ್ಥಾನ, ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೆಶನೀಶ್ವರ ದೇವಸ್ಥಾನ ಹಾಗೂ ಬೈಂದೂರಿನ ಸೇನೇಶ್ವರ ದೇವಸ್ಥಾನ. ಉಡುಪಿ ತಾಲೂಕಿನ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ ಹಾಗೂ ಬನ್ನಂಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ.

ಪ್ರವರ್ಗ ‘ಸಿ’ ದೇವಸ್ಥಾನಗಳು: ಉಡುಪಿ ತಾಲೂಕಿನ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನ, ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಇಂದ್ರಾಳಿಯ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಆತ್ರಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತೆಂಕನಿಡಿಯೂರು ಬೆಳ್ಕಳೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊರಂಗ್ರಪಾಡಿ ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೊರಂಗ್ರಪಾಡಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದ್ಯಾವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಆದಿಉಡುಪಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನ ಹಾಗೂ ಪೆರಂಪಳ್ಳಿಯ ಶ್ರೀ ಮಹಾವಿಷ್ಣು ದೇವಸ್ಥಾನ. ಕಾಪು ತಾಲೂಕಿನ ಕಳತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಪಾದೇಬೆಟ್ಟು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಾಪು ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪಿಲಾರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಜೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಬೆಳ್ಳೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಕಾರ್ಕಳ ತಾಲೂಕಿನ ಎರ್ಲಪಾಡಿಯ ಶ್ರೀ ವೆಂಕಟರಮಣ ದೇವಸ್ಥಾನ, ಕಬ್ಬಿನಾಲೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಮುದ್ದಾಣು ಇನ್ನಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಕುಂದಾಪುರ ತಾಲೂಕಿನ ಬಡಾಕೋಡಿಯ ಶ್ರೀ ಅರಮ ಚೆನ್ನಕೇಶವ ದೇವಸ್ಥಾನ, ಕುಂದಬಾರಂದಾಡಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಗುಜ್ಜಾಡಿ ಗ್ರಾಮದ ಶ್ರೀ ಗುಹೇಶ್ವರ ದೇವಸ್ಥಾನ, ವಡೇರ ಹೋಬಳಿಯ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಮೈಲಾರೇಶ್ವರ ದೇವಸ್ಥಾನ, ಕಾಳಾವರದ ಶ್ರೀ ವನದುರ್ಗಾ ದೇವಸ್ಥಾನ, ಬೈಲೂರು ಶಂಕರನಾರಾಯಣದ ಶ್ರೀಮಹಿಷಮರ್ಧಿನಿ ದೇವಸ್ಥಾನ, ಕೋಟೇಶ್ವರದ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ, ಹಟ್ಟಿಕುದ್ರು ಶ್ರೀ ವಿನಾಯಕ ದೇವಸ್ಥಾನ, ಹೆಂಗವಳ್ಳಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಸ್ರೂರಿನ ಶ್ರೀ ಓಂಕಾರೇಶ್ವರ ದೇವಸ್ಥಾನ, ಕುಂದಾಪುರದ ಶ್ರೀ ಆಂಜನೇಯ ದೇವಸ್ಥಾನ ಹಾಗೂ ಮಲ್ಲಿಕಾರ್ಜುನ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ತೆಕ್ಕಟ್ಟೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೊಸಂಗಡಿಯ ಶ್ರೀ ಹೊಳೆ ಶಂಕರನಾರಾಯಣ ದೇವಸ್ಥಾನ, ಇಡೂರು ಕುಂಜ್ಞಾಡಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಲ್ಕುಂದದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಬೈಂದೂರು ತಾಲೂಕಿನ ಚಿಕ್ತಾಡಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಿಜೂರು ಅರೆಕಲ್ಲು ಹಿರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಾಡಾ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಬ್ರಹ್ಮಾವರ ತಾಲೂಕಿನ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾಲ್ಕೂರು ಮಾರಾಳಿಯ ಶ್ರೀ ವಿನಾಯಕ ದೇವಸ್ಥಾನ, ತಂತ್ರಾಡಿಯ ಶ್ರೀ ಕಲ್ಲುಗುಂಡಿ ಮಹಾಗಣಪತಿ ದೇವಸ್ಥಾನ, ಗುಂಡ್ಮಿಯ ಮಾಣಿ ಚೆನ್ನಕೇಶವ ದೇವಸ್ಥಾನ, ಹಲುವಳ್ಳಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಬಾರ್ಕೂರು ಶ್ರೀ ಬಟ್ಟೆ ವಿನಾಯಕ ದೇವಸ್ಥಾನ, ಚಾಂತಾರು ಕೆರೆಕಟ್ಟೆ ಶ್ರೀ ಹನುಮಂತ ದೇವಸ್ಥಾನ, ಬಾರ್ಕೂರು ಕೂಡ್ಲಿಯ ಶ್ರೀ ಜನಾರ್ಧನ ದೇವಸ್ಥಾನ, ಚೇರ್ಕಾಡಿ ಕರ್ಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಯಡ್ತಾಡಿಯ ಶ್ರೀ ಚೌಡೇಶ್ವರಿ ಭೂತ ದೇವಸ್ಥಾನ, ಬಾರ್ಕೂರು ಹನೆಹಳ್ಳಿಯ ಮಹತೋಭಾರ ಶ್ರೀ ಸೋಮೇಶ್ವರ ದೇವಸ್ಥಾನ, ಹೊಸಾಳ ಗ್ರಾಮದ ಚೌಳಿಕೆರೆ ಶ್ರೀ ಭೈರವ (ಮಹಾಲಿಂಗೇಶ್ವರ ವಿನಾಯಕ) ದೇವಸ್ಥಾನ ಹಾಗೂ ಕೋಟ ಹಿರೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಹೆಬ್ರಿ ತಾಲೂಕಿನ ಅಲ್ಬಾಡಿಯ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಕೊಠಡಿ ಸಂಖ್ಯೆ 206, ಬಿ ಬ್ಲಾಕ್, ಮೊದಲನೇ ಮಹಡಿ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!