ಮಣಿಪಾಲ ಜ್ಞಾನಸುಧಾ ಕಾಲೇಜ್: ಸಿಎ ಫೌಂಡೇಶನ್, ಸಿ.ಎಸ್.ಇ.ಇ.ಟಿ ಕ್ಲ್ಯಾಟ್ ಕಾರ್ಯಗಾರ

Oplus_131072

ಮಣಿಪಾಲ:‘ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಫೆಶನಲ್ ಕೋರ್ಸ್ಗಳು ಬಹಳ ಮುಖ್ಯ, ಪದವಿ ಪೂರ್ವ ಶಿಕ್ಷಣದ ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬಯಸುವವರಿಗೆ ನಡೆಸುವ ಮೊದಲ ಹಂತದ ಪರೀಕ್ಷೆ ಸಿ.ಎ.-ಫೌಂಡೇಶನ್, ಕಂಪೆನಿ ಸೆಕ್ರೆಟರಿ ವಿಭಾಗದ ಮೊದಲ ಹಂತದ ಪರೀಕ್ಷೆ ಸಿ.ಎಸ್.ಇ.ಇ.ಟಿ. ವಿದ್ಯಾರ್ಥಿಗಳನ್ನು ಆ ವಿಭಾಗಗಳಲ್ಲದೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಬುನಾದಿಯಿದ್ದಂತೆ, ದೇಶದ ಅಗ್ರ 22 ಕಾನೂನು ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಲು ನಡೆಯುವ ಕ್ಲ್ಯಾಟ್(ಸಿ.ಎಲ್.ಎ.ಟಿ.) ಪರೀಕ್ಷೆಯ ಅರಿವು ಕೂಡ ಹೆಚ್ಚಿಸಿ ಕಾನೂನು ಪದವಿಯ ಮಹತ್ವ ಮತ್ತು ಬೇಡಿಕೆಯನ್ನು ವಿದ್ಯಾಥಿಗಳಿಗೆ ತಿಳಿಯಪಡಿಸುವ ಅಗತ್ಯವಿದೆ’ ಎಂದು ಮಣಿಪಾಲದ ಪ್ರೊಫೆಶನಲ್ ಟ್ರೈನರ್ ಶ್ರೀ ಚಂದನ್ ರಾವ್ ಹೇಳಿದ್ದಾರೆ.

ಅವರು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿಗಳಿಗೆ ನಡೆದ ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಕ್ಲ್ಯಾಟ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ವಾಣಿಜ್ಯ ವಿಭಾಗ ಮುಖ್ಯಸ್ಥರಾದ ರವಿ ಜಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!